ಕಿನ್ನಿಮುಲ್ಕಿ ಕೃಷ್ಣಮೂರ್ತಿ ಆಚಾರ್ಯ ನೇತ್ರತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

ಉಡುಪಿ: ಮೊಗವೀರ ಯುವ ಸಂಘಟನೆಯ ಉಡುಪಿ, ಬೆಳ್ಳಂಪಲ್ಲಿ ಘಟಕ ಹಾಗೂ ಡಾ| ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಉಡುಪಿ, ಕೆ.ಕೃಷ್ಣಮೂರ್ತಿ ಆಚಾರ್ಯ, ಕಿನ್ನಿಮುಲ್ಕಿ ಇವರ  ನೇತ್ರತ್ವದಲ್ಲಿ ಉಡುಪಿ ಜಿಲ್ಲಾಡಳಿತ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಉಡುಪಿಯ ಶ್ರೀಕೃಷ್ಣ ಮಠದ ಪಾರ್ಕಿಂಗ್ ಏರಿಯಾದ ಮಥುರಾ ಕಂಫರ್ಟ್ಸ್ ನಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ಈ ಶಿಬಿರವನ್ನು ಕೆಎಂಸಿ ಮಣಿಪಾಲ ಆಸ್ಪತ್ರೆಯ ಮೈದ್ಯಕೀಯ ಉಪ ಅಧೀಕ್ಷಕ ಡಾ. ಪದ್ಮರಾಜ್ ಹೆಡ್ಗೆ ಉದ್ಘಾಟಿಸಿದರು. ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಬಡಗು ಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಜನರಲ್ ಮ್ಯಾನೇಜರ್ ಜಯಕರ ಶೆಟ್ಟಿ ಇಂದ್ರಾಳಿ ಅವರು ಮಾತನಾಡಿ, ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ಕೆ.ಕೃಷ್ಣಮೂರ್ತಿ ಆಚಾರ್ಯ ಅವರು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಾಗಿದ್ದು, ಒಂದು ಮಾದರಿ ಕಾರ್ಯವಾಗಿದೆ ಎಂದರು.

ಇದರೊಂದಿಗೆ ಕೃಷ್ಣ ಮೂರ್ತಿ ಅವರು ಕಳೆದ 20 ವರ್ಷಗಳಿಂದ ನಡೆಸುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದ ಅವರು ಕೃಷ್ಣ ಮೂರ್ತಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಈ ವೇಳೆ ಮಾತು ಮುಂದುವರೆಸಿದ ಅವರು, ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲ, ಅಲ್ಲದೆ ರಕ್ತವನ್ನು ಕೃತಕವಾಗಿ ಸೃಷ್ಟಿಸಲೂ ಸಾಧ್ಯವಾಗುವುದಿಲ್ಲ. ಹೀಗಿರುವಾಗ ಕಷ್ಟ ಕಾಲದಲ್ಲಿ ರಕ್ತ ಬೇಕು ಎಂದರೆ ಕೋಟಿ ಕೊಟ್ಟರೂ ಸಿಗುವುದಿಲ್ಲ. ಅಲ್ಲದೆ ಅಗತ್ಯ ಇದ್ದವರಿಗೆ ಬೇಕೆಂದಾಗ ತುರ್ತು ಸಮಯಕ್ಕೆ ರಕ್ತ ಸಿಗುವುದಿಲ್ಲ. ಹಾಗಾಗಿ ದಾನಿಗಳು ರಕ್ತ ನೀಡಿದರೆ ಮಾತ್ರ ಅಗತ್ಯವಿದ್ದವರಿಗೆ ಕ್ಲಪ್ತ ಕಾಲದಲ್ಲಿ ರಕ್ತ ಸಿಗುವಂತೆ ಮಾಡಲು ಸಹಕಾರಿಯಾಗುತ್ತದೆ ಎಂದರು. 

ಈ ಸಂದರ್ಭ ಕೆಎಂಸಿಯ ವೈದ್ಯಾಧಿಕಾರಿ ಡಾ. ರವೀಂದ್ರ ಪ್ರಭು, ದ.ಕ ಮತ್ತು ಉಡುಪಿ ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಅಧ್ಯಕ್ಷ ಜಯ ಸಿ ಕೋಟ್ಯಾನ್, ಉಡುಪಿಯ ಮಾಂಡವಿ ಬಿಲ್ಡರ್ಸ್ ಹಾಗೂ ಡೆವಲಪರ್ಸ್ ನ ಜೆರ‍್ರಿ ವಿನ್ಸಂಟ್ ಡಯಾಸ್, ಸೈಮನ್ಸ್ ಅಸೋಷಿಯೇಶನ್ ಉಡುಪಿ ಇದರ ಜಯಪ್ರಕಾಶ್ ಸೈಮನ್ಸ್, ಉಡುಪಿಯ ಅಭಯ ಹಸ್ತ ಹೆಲ್ಪ್ ಲೈನ್ಸ್ ನ  ಗೌರವ ಸಲಹೆಗಾರ ಡಾ. ಬಾಲಕೃಷ್ಣ ಮುದ್ದೋಡಿ, ಉಡುಪಿ ಕನ್ನರ್ಪಾಡಿಯ ಜಯ ದುರ್ಗಾ ಪರಮೇಶ್ವರಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಮುರಳೀಧರ ಬಲ್ಲಾಳ್ ಮುಖ್ಯ ಅಥಿತಿಗಳಾಗಿ ಭಾಗವಹಿಸಿದದ್ದರು.

Leave a Reply

Your email address will not be published. Required fields are marked *

error: Content is protected !!