ಗೋಕರ್ಣ: ಸಮುದ್ರದಲ್ಲಿ ಮುಳುಗಿ ಮೂರು ಪ್ರವಾಸಿಗರ ಸಾವು
ಕುಮಟಾ: ಸಮುದ್ರದಲ್ಲಿ ಈಜಾಡಲು ಹೋಗಿ ಮೂವರು ಪ್ರವಾಸಿಗರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗೋಕರ್ಣ ಮೈನ ಬೀಚ್ ನಲ್ಲಿ ನಡೆದಿದೆ.
ಕುಮಟಾ ತಾಲೂಕಿನ ಗೋಕರ್ಣ ಸಮುದ್ರಕ್ಕೆ ಐವರು ಈಜಾಡಲು ತೆರಳಿದ್ದರು. ಸಮುದ್ರದ ಅಲೆಯ ರಭಸಕ್ಕೆ ಮೂವರು ಮುಳುಗಿ ಮೃತ ಪಟ್ಟರೆ, ಇರ್ವರನ್ನು ಲೈಫ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ್ದಾರೆ.
ಬೆಂಗಳೂರು ಮೂಲದ ಸಿದ್ದರಾಜು( 21), ಅನ್ಯ ನಾಯಕ್ (20), ರವಿ (35) ಮ್ರತ ದುರ್ದೈವಿಗಳು. ಬೆಂಗಳೂರಿನ ಗಾರ್ಮೇಂಟ್ಸ್ ಕೆಲಸದ ಯುವಕ-ಯುವತಿಯರು ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಗೋಕರ್ಣ ಪೋಲಿಸರು ಭೇಟಿ ಪ್ರಕರಣ ಗೋಕರ್ಣ ಠಾಣೆಯಲ್ಲಿ ದಾಖಲು