ಬೈಂದೂರು: ತಾಲೂಕಿನ 15 ಗ್ರಾ.ಪಂ.ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪಟ್ಟಿ ಪ್ರಕಟ
ಬೈಂದೂರು: ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ಅಧಿನಿಯಮ ಮತ್ತು ರಾಜ್ಯ ಚುನಾವಣಾ ಆಯೋಗದ ಆದೇಶದಂತೆ 2021ರ ಜ.1 ರಂದು ನಿರ್ದೇಶಿಸಿದಂತೆ 2020 ನೇ ಸಾಲಿನ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ 15 ಗ್ರಾಮ ಪಂಚಾಯತ್ಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಹುದ್ದೆಗಳನ್ನು ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರ ಸಮ್ಮುಖದಲ್ಲಿ ಜ.21 ರಂದು ಮೀಸಲಿರಿಸಿ ಹಂಚಿಕೆ ಮಾಡಲಾಗಿದೆ.
ಅದರಂತೆ 2020 ನೇ ಸಾಲಿನ ಚುನಾವಣೆ ಮುಗಿದ ಗ್ರಾಮ ಪಂಚಾಯತ್ಗಳಿಗೆ 30 ತಿಂಗಳ ಮೊದಲ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿದೆ