ಉಡುಪಿ: ಜ.22ರಂದು ಎಸ್‌ಎಸ್‌ಎಲ್‌ಸಿ ಇಂಗ್ಲೀಷ್ ವಿಷಯದ ಕುರಿತು ಫೋನ್ ಇನ್

ಉಡುಪಿ: ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮಕ್ಕಳ ಕಲಿಕಾ ಸಾಮರ್ಥ್ಯ ಹಾಗೂ ಫಲಿತಾಂಶದ ಬಲವರ್ಧನೆಗಾಗಿ ಪಠ್ಯಾದಾರಿತ ಫೋನ್ ಇನ್ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ.

ಅದರಂತೆ ಈ ವಾರ ಜ.22 ರಂದು ಸಂಜೆ 5 ರಿಂದ ರಾತ್ರಿ 7 ರವರೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಬಲವರ್ಧನೆಗಾಗಿ ಎಸ್.ಎಸ್.ಎಲ್.ಸಿ, ಇಂಗ್ಲೀಷ್ ದ್ವಿತೀಯ ಭಾಷೆ ವಿಷಯಕ್ಕೆ ಸಂಬಂಧಿಸಿ ಫೋನ್ ಇನ್ ಕಾರ್ಯಕ್ರಮವನ್ನು ಬ್ರಹ್ಮಾವರದ ಸರಕಾರಿ ಪದವಿ ಪೂರ್ವ(ಬೋರ್ಡ ಶಾಲೆ)ಕಾಲೇಜಿನಲ್ಲಿ ಆಯೋಜಿಸಲಾಗಿದೆ. 

ಈ ಪೋನ್ ಇನ್ ಕಾರ್ಯಕ್ರಮ ಮೂಲಕ ಜಿಲ್ಲೆಯ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಇಂಗ್ಲೀಷ್ ದ್ವಿತೀಯ ಭಾಷೆ ವಿಷಯದಲ್ಲಿ ಇರುವ ತಮ್ಮ ಕಲಿಕಾ ಸಮಸ್ಯೆಗಳಿಗೆ ಸಂಬಂಧಿಸಿ ಕರೆ ಮಾಡಿ ಪರಿಹಾರ ಪಡೆಯಬಹುದಾಗಿದೆ. ಇದರೊಂದಿಗೆ ಪಾಲಕರು  ಹಾಗೂ ಸಾರ್ವಜನಿಕರೂ ಸಹ ಡಿಡಿಪಿಐ ನಂಬರ್‌ಗೆ ಕರೆ ಮಾಡಿ ಪರೀಕ್ಷಾ ಸಿದ್ಧತೆ ಮತ್ತಿತರ ಶೈಕ್ಷಣಿಕ ಸಮಸ್ಯೆಗಳಿಗೆ ಸಂಬಂಧಿಸಿ ತಮ್ಮ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳಬಹುದಾಗಿದೆ. 

ಈ ವಾರದ ಎಸ್ ಎಸ್ ಎಲ್ ಸಿ ಇಂಗ್ಲೀಷ್ ದ್ವಿತೀಯ ಭಾಷೆ ವಿಷಯದ ಸಮಸ್ಯೆಗಳಿಗೆ ಕರೆ ಮಾಡಬೇಕಾದ ದೂರವಾಣಿ ಸಂಖ್ಯೆಗಳು
ಸುಪ್ರೀತಾ ಕೆ. – 9449246057, ಸಂದ್ಯಾ ಎಸ್ -9538828245, (ಇಂಗ್ಲೀಷ್ ದ್ವಿತೀಯ ಭಾಷೆ)
ಜೆ. ಫ್ರಾನ್ಸಿಸ ಡಿ ಸಿಲ್ವ- 9480666337, ಶ್ಯಾಮಿಲಿ – 9480230550, (ಇಂಗ್ಲೀಷ್ ದ್ವಿತೀಯ ಭಾಷೆ)
ಅಶೋಕ ಕುಮಾರ ಶೆಟ್ಟಿ -6362994652, ರಮ್ಯಾ ಬಿ-9448548868 (ಇಂಗ್ಲೀಷ್ ದ್ವಿತೀಯ ಭಾಷೆ)
ಆನಂದ ಶೆಟ್ಟಿ-9448911005, ಗಣೇಶ್-9886741608, (ಇಂಗ್ಲೀಷ್ ದ್ವಿತೀಯ ಭಾಷೆ)
ಶೋಭಾ ಪಿ – 9481916574, ಸೀಮಾ- 7338110589 (ಪ್ರಥಮ ಭಾಷೆ ಇಂಗ್ಲೀಷ್)
ಪರೀಕ್ಷಾ ಸಿದ್ಧತೆ ಮತ್ತಿತರ ಶೈಕ್ಷಣಿಕ ಸಮಸ್ಯೆಗಳಿಗೆ ಸಂಬಂಧಿಸಿ ಕರೆ ಮಾಡುವುದಾದರೆ ಎನ್‌ಎಚ್ ನಾಗೂರ ಡಿಡಿಪಿಐ – 94489 99353
ಬ್ರಹ್ಮಾವರ  ಬಿಇಓ. ಓಆರ್ ಪ್ರಕಾಶ್- 9480695375  
ಈ ನಂಬರ್ ಗಳಿಗೆ ಕರೆ ಮಾಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್ ಎಚ್ ನಾಗೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!