ರಿಕ್ರಿಯೇಶನ್ ಕ್ಲಬ್- ಜಿಲ್ಲಾಧಿಕಾರಿ ಆದೇಶ ರದ್ಧು
ಮಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನೋಂದಾಯಿತ ರಿಕ್ರಿಯೇಶನ್ ಕ್ಲಬ್ ಮುಚ್ಚಲು ಜಿಲ್ಲಾಧಿಕಾರಿ ಆಗಸ್ಟ್ 18ರಂದು ಹೊರಡಿಸಿದ ಆದೇಶವನ್ನು ಮಾನ್ಯ ಹೈಕೋರ್ಟ್ ರದ್ಧುಪಡಿಸಿ ತೀರ್ಪು ನೀಡಿದೆ.
ಪ್ರಸ್ತುತ ಶಾಲಾ, ಕಾಲೇಜುಗಳು ಈಗಾಗಲೇ ತೆರೆಯಲ್ಪಟ್ಟಿವೆ ಮತ್ತು ಇಡೀ ಸಾರ್ವಜನಿಕ ಉದ್ಯಮಗಳು ಸುಗಮವಾಗಿ ನಡೆಯುತ್ತಿವೆ. ಆದ್ದರಿಂದ, ಜಿಲ್ಲಾಧಿಕಾರಿ ಜಾರಿಗೊಳಿಸಿದ ಸಂಬಂಧಪಟ್ಟ ಆದೇಶವನ್ನು ರದ್ದುಪಡಿಸಿ ಕರ್ನಾಟಕದ ಹೈಕೋರ್ಟ್ನ ವಿಭಾಗೀಯ ನ್ಯಾಯಪೀಠವು ತೀರ್ಪು ನೀಡಿ, ಮನರಂಜನಾ ಕ್ಲಬ್ಗಳನ್ನು ತೆರೆಯಲು ಅನುಮತಿ ನೀಡಿದೆ.
ಕೋವಿದ್ ಹಿನ್ನೆಲೆಯಲ್ಲಿ ಮನರಂಜನಾ ಕ್ಲಬ್ಗಳನ್ನು ಮುಚ್ಚಲು ನಾಲ್ಕು ಅಂಶಗಳ ಆಧಾರದಲ್ಲಿ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದರು. ಅರ್ಜಿದಾರರ ಪರವಾಗಿ ನ್ಯಾಯವಾದಿ ರಾಜರಾಮ್ ಸೂರಂಬೈಲ್ ಅವರು ವಾದಿಸಿದ್ದರು.