ಉಡುಪಿ ನಗರ ಸಭೆ: 5 ನಾಮ ನಿರ್ದೇಶನ ಸದಸ್ಯರ ಆಯ್ಕೆ
ಉಡುಪಿ: ನಗರಸಭೆಗೆ ನೂತನವಾಗಿ ಐದು ಮಂದಿಯನ್ನು ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಸರಕಾರ ಅಧಿಸೂಚನೆ ಹೊರಡಿದೆ.
ಮಲ್ಪೆಯ ವಡಬಾಂಡೇಶ್ವರ ದ ವಿಜಯ ಕುಂದರ್, ಕಿನ್ನಿಮೂಲ್ಕಿ ದೇವದಾಸ್ ವಿ. ಶೆಟ್ಟಿಗಾರ್, ಪುತ್ತೂರಿನ ಸುಬ್ರಹ್ಮಣ್ಯ ನಗರದ ದಿನೇಶ್ ಪೈ, ಪುತ್ತೂರಿನ ಕುದ್ಮುಲ್ ರಂಗರಾವ್ ನಗರದ ಸುಬೇದಾ, ಮೂಡುಪೆರಂಪಳ್ಳಿಯ ಅರುಣಾ ಎಸ್ ಪೂಜಾರಿ ಇವರನ್ನು ಮುಂದಿನ ಆದೇಶದವರೆಗೆ ಉಡುಪಿ ನಗರಸಭೆಗೆ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿಯವರ ಪ್ರಕಟಣೆ ತಿಳಿಸಿದೆ.