ಫೆ.14 ರಿಂದ 16 ರವರೆಗೆ ಅಘೋರೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ
ಬ್ರಹ್ಮಾವರ: ಕಾರ್ತಟ್ಟು ಚಿತ್ರಪಾಡಿಯ ಅಘೋರೇಶ್ವರ ದೇವಸ್ಥಾನದಲ್ಲಿ ಕಳೆದ ವರ್ಷ ನಡೆಯಬೇಕಿದ್ದ ಅಷ್ಟಬಂಧ, ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವನ್ನು ಫೆಬ್ರುವರಿ 14ರಿಂದ 16ರವರೆಗೆ ಆಯೋಜಿಸಲು ಎಂದು ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. ವೇದಮೂರ್ತಿ ಕೃಷ್ಣ ಸೋಮಯಾಜಿ ಮತ್ತು ಬಾಲಕೃಷ್ಣ ತಂತ್ರಿ ನೇತೃತ್ವದಲ್ಲಿ 14ರಂದು ದೇವತಾ ಪ್ರಾರ್ಥನೆ, ಗಣಹೋಮ, ನವಗ್ರಹ ಹೋಮ, ವಾಸ್ತು ಪೂಜಾ ಬಲಿ, 15ರಂದು ದೇವರ ಪ್ರತಿಷ್ಠೆ, ನವೋತ್ತರ ಕಲಶ ಸ್ಥಾಪನೆ, 16ರಂದು ಬ್ರಹ್ಮಕಲಶಾಭಿಷೇಕ, ಮಹಾಪೂಜೆ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. 16ರಂದು ಸಂಜೆ 6.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ನಂತರ ಭಾರ್ಗವಿ ನೃತ್ಯ ತಂಡದವರಿಂದ ಭಾವ ಯೋಗ ಗಾನ ನೃತ್ಯ ನಡೆಯಲಿದೆ. 14ರಂದು ಹಸಿರು ಹೊರೆ ಕಾಣಿಕೆ ಸ್ವೀಕರಿಸಲಾಗುವುದು ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕಿದಿಯೂರು ಉದಯ್ ಕುಮಾರ್ ಶೆಟ್ಟಿ ತಿಳಿಸಿದರು. ಆಮಂತ್ರಣ ಪತ್ರಿಕೆ ಬಿಡುಗಡೆ: ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಬೆಂಗಳೂರಿನ ಹೋಟೆಲ್ ಉದ್ಯಮಿ ಜಿ.ಪ್ರಕಾಶ್ ಮಯ್ಯ ಭಾನುವಾರ ಬಿಡುಗಡೆಗೊಳಿಸಿದರು. ಕೋಟ ಮಣೂರಿನ ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ್ ಸಿ. ಕುಂದರ್, ಉದ್ಯಮಿ ಸುರೇಶ್ ಹಂದೆ, ಲೆಕ್ಕಪರಿಶೋಧಕ ಮುರಳೀಧರ ಕಾರಂತ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕಿದಿಯೂರು ಉದಯ ಕುಮಾರ್ ಶೆಟ್ಟಿ, ಗೌರವಾಧ್ಯಕ್ಷ ಮಂಜುನಾಥ್ ನಾಯರಿ, ಆಡಳಿತ ಮೊಕ್ತೇಸರ ಚಂದ್ರ ಶೇಖರ ಕಾರಂತ, ಕಾರ್ಯದರ್ಶಿ ಶ್ಯಾಮ ಸುಂದರ ನಾಯರಿ ಮತ್ತಿತರರು ಇದ್ದರು. |