ಪಡುಬಿದ್ರೆ: ನಾಳೆ ‘ಅಪ್ನಾ ವಿಲೇಜ್ ಮಾರ್ಟ್’ ಬ್ರಹತ್ ಸೂಪರ್ ಮಾರ್ಕೆಟ್ ಉದ್ಘಾಟನೆ

ಪಡುಬಿದ್ರೆ: ಜಿಲ್ಲೆಯ ಗಡಿಭಾಗದಲ್ಲಿರುವ ಪಡುಬಿದ್ರೆಯಲ್ಲಿ ಅಪ್ನಾ ವಿ ಕೇರ್ ಎಂಟರ್‌ಪ್ರೈಸಸ್ ಪ್ರೈವೆಟ್  ಲಿಮಿಟೆಡ್‌ನ ಬಹುದೊಡ್ಡ ಸೂಪರ್ ಮಾರ್ಕೆಟ್ ‘ಅಪ್ನಾ ವಿಲೇಜ್ ಮಾರ್ಟ್’ ಇದರ ಉದ್ಘಾಟನಾ ಕಾರ್ಯಕ್ರಮ ಜ. 18 ರಂದು ಪಡುಬಿದ್ರೆಯಲ್ಲಿ ನಡೆಯಲಿದೆ. 

ಅಪ್ನಾ ವಿಲೇಜ್ ಮಾರ್ಟ್ ನ ಉದ್ಘಾಟನೆಯನ್ನು ಡೈಜಿ ವರ್ಲ್ಡ್ ಮಾಧ್ಯಮದ ಮುಖ್ಯಸ್ಥರಾದ ವಾಲ್ಟರ್ ನಂದಳಿಕೆ ಉದ್ಘಾಟಿಸಲಿದ್ದಾರೆ. ಖ್ಯಾತ ಹಾಸ್ಯ ನಟ ಅರವಿಂದ್ ಬೋಳಾರ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 

ಉದ್ಘಾಟನಾ ಕಾರ್ಯಕ್ರಮದಲ್ಲಿ ಪಡುಬಿದ್ರೆಯ ಬ್ರಹ್ಮಸ್ಥಾನದ ಪಿ.ಜಿ ನಾರಾಯಣ ರಾವ್, ಪಡುಬಿದ್ರೆ ಮಸೀದಿಯ ಖತೀಬ್ ಜನಾಬ್ ಹಾಜಿ ಎಸ್‌ಎಮ್ ಅಬ್ದುಲ್ ಹಮೀದ್ ಮದಾನಿ, ಪಲಿಮಾರಿನ ಸಂತ ಪಿಯೂಸ್ ಚರ್ಚಿನ ಧರ್ಮಗುರುಗಳಾದ ವಂ. ಡಾ. ರೋಕ್  ಡಿಸೋಜಾ, ಎರ್ಮಾಳ್ ಸೇಕ್ರೆಡ್ ಹಾರ್ಟ್ ಚರ್ಚಿನ ಧರ್ಮಗುರು ವಂ. ರೊನಾಲ್ಡ್ ಮಿರಂದಾ ಉಪಸ್ಥಿತರಿರಲಿದ್ದಾರೆಂದು ಅಪ್ನಾ ವಿ ಕೇರ್ ಎಂಟರ್ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ನ ಪ್ರಕಟನೆ ತಿಳಿಸಿದೆ.

ವಿಶಾಲವಾದ ಸೂಪರ್ ಮಾರ್ಕ್‌ಟ್‌ನಲ್ಲಿ ದಿನಬಳಕೆ ವಸ್ತುಗಳು, ಬೇಬಿ ಕೇರ್, ಬ್ಯೂಟಿ ಕಾಸ್ಮೆಟಿಕ್, ಸ್ಕಿನ್ ಕೇರ್ ಸಹಿತ ಆರು ಸಾವಿರಕ್ಕೂ ಮಿಕ್ಕಿದ ವಸ್ತುಗಳು ಒಂದೇ ಸೂರಿನಡಿ ದೊರೆಯಲಿದೆ.

Leave a Reply

Your email address will not be published. Required fields are marked *

error: Content is protected !!