ಡ್ರೋಣ್ ನಲ್ಲಿ ಬಂದ ಮಂಗಳಸೂತ್ರ ವಿಡಿಯೋ ಭಾರೀ ವೈರಲ್!

ಕಾರ್ಕಳ: ಸಮಾಜದಲ್ಲಿ ಬದಲಾವಣೆ ಸಹಜ, ಆಯಾ ಕಾಲಕ್ಕೆ ತಕ್ಕಂತೆ ಬದಲಾವಣೆಯೊಂದಿಗೆ ಬದಲಾಗುವ ಭರದಲ್ಲಿ ಅನೇಕ ಹೊಸತನಗಳನ್ನು ನಮ್ಮದಾಗಿಸಿಕೊಳ್ಳುತ್ತಾ ಹೋಗುತ್ತೇವೆ. ಜೀವನ ಶೈಲಿ, ಮಾತುಗಾರಿಕೆ, ತಿನ್ನುವ ಆಹಾರ, ಉಡುಗೆ ತೊಡುಗೆ ಹೀಗೆ ಎಲ್ಲಾ ರೀತಿಯಲ್ಲೂ ಬದಲಾವಣೆಗೆ ನಮ್ಮನ್ನು ನಾವು ರೂಡಿಸಿಕೊಳ್ಳುತ್ತೇವೆ. 

ಆಧುನೀಕರಣಕ್ಕೆ ನಾವು ಎಷ್ಟೋಂದು ಒಗ್ಗಿಕೊಂಡಿದ್ದೇವೆ ಎಂದರೆ ನಮ್ಮ ಆಚಾರ ವಿಚಾರಗಳಲ್ಲಿಯೂ ಅನೇಕ ರೀತಿಯ ಬದಲಾವಣೆಗಳು ನಡೆಯುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ ಕಾರ್ಕಳದಲ್ಲೊಂದು  ಮದುವೆ ಸಮಾರಂಭದಲ್ಲಿ ನಡೆದಿದೆ. ಸಾಮಾನ್ಯವಾಗಿ ಮದುವೆ ಸಮಾರಂಭದಲ್ಲಿ ಮಂಗಳಸೂತ್ರವು ಹಿರಿಯ ಆಶಿರ್ವಾದ ಪಡೆದು ವರನ ಕೈ ಸೇರುತ್ತೆದೆ. ಆದರೆ ಕಾರ್ಕಳದ ಮಿಯಾರ್ ನಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಬಂದ ಮಂಗಳಸೂತ್ರ ಆಕಾಶದಿಂದ ಮೂಡಿಬಂದಿದೆ. ಅದೂ ಡ್ರೋಣ್ ಮೂಲಕ…. 

ಹೌದು ಇಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಮದುಮಗನ ಆಸೆಯಂತೆ ಡ್ರೋಣ್ ಮೂಲಕ ಮಂಗಳ ಸೂತ್ರ ಆಗಸದಿಂದ ಬಂದು ವರನ ಕೈ ಸೇರಿತ್ತು. ಮದುವೆ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಕಾರ್ಕಳದಲ್ಲಿ ನಡೆದ ಈ ವಿವಾಹ ಸಮಾರಂಭ ಸಂಸ್ಕೃತಿಯ ಪರವೋ… ವಿರೋಧವೋ ಗೊತ್ತಿಲ್ಲ ಆದರೆ ಮದುಮಕ್ಕಳು, ನೆರೆದಿದ್ದವರು ಸಂಭ್ರಮಿಸಿದ್ದು, ಮಂಗಳಸೂತ್ರ ಆಕಾಶದಿಂದ ಧರೆಗೆ ಇಳಿದು ಬರುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಏನೇ ಇರಲಿ ವಿವಾಹದ ಬಳಿಕ ದಂಪತಿಗಳು ತಮ್ಮ ಜೀವನದ ನೌಕೆಯಲ್ಲಿ, ಸಂತಸದಿಂದ ಸಾಗುವುದಕ್ಕೆ ವಿವಾಹ ಹೇಗೆ ನಡೆಯಿತು ಎನ್ನುವುದು ಮುಖ್ಯ ಅಲ್ಲ ಅಲ್ವಾ…

Leave a Reply

Your email address will not be published. Required fields are marked *

error: Content is protected !!