ಫ್ಲೈಓವರ್, ಸರ್ವಿಸ್ ರಸ್ತೆ ಕಾಮಗಾರಿ ಶೀಘ್ರ ಮುಗಿಯದಿದ್ದರೆ ಬ್ರಹತ್ ಹೋರಾಟ: ಹರಿಪ್ರಸಾದ್
ಕುಂದಾಪುರ. ಹಲವಾರು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂಪೂರ್ಣ ಗೊಳಿಸದಿರಲು ಭಾರತಿಯ ಜನತಾ ಪಕ್ಷದ ಇಚ್ಚಾ ಶಕ್ತಿಯ ಕೊರತೆಯೆ ಕಾರಣ. ತಾವು ಎನೂ ಕೆಲಸ ಮಾಡದಿದ್ದರೂ ಕರಾವಳಿಯ ಮತದಾರರು ತಮ್ಮನ್ನು ಕೈ ಬಿಡುವುದಿಲ್ಲ ಎನ್ನುವ ಬಲವಾದ ನಂಬಿಕೆ ಬಿಜೆಪಿ ಜನಪ್ರತಿನಿಧಿಗಳಿಗಿದೆ. ಈ ಹಿನ್ನೆಲೆಯಲ್ಲಿ ಈ ತನಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂಪೂರ್ಣವಾಗಿಲ್ಲ ಮಾರ್ಚ್ ಅಂತ್ಯಕ್ಕೆ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಕಾಮಗಾರಿ ಮುಗಿಸುವುದಾಗಿ ಹೆದ್ದಾರಿ ಅಧಿಕಾರಿಗಳು ಮತ್ತೊಂದು ಗಡವು ನೀಡಿದ್ದು , ಕಾಲ ಮಿತಿಯೊಳಗೆ ಹೆದ್ದಾರಿ ಕಾಮಗಾರಿ ಮುಗಿಸುವ ಲಕ್ಷಣಗಳು ಕಾಣುತ್ತಿಲ್ಲ .ಕುಂದಾಪುರ ಪಟ್ಟಣದ ಸಮೀಪ ರಸ್ತೆಗಳನ್ನು ಇನ್ನೂ ಕೂಡ ಸರಿಯಾಗಿ ಮುಚ್ಚಿಲ್ಲ .ಬಸ್ರೂರು ಮೂರಕೈ ಯಿಂದ ವಿನಾಯಕದ ತನಕ ರಸ್ತೆಗೆ ಡಾಂಬಾರು ಹಾಕದಿರುವುದರಿಂದ ಸ್ಥಳೀಯ ಜನರು ಮತ್ತು ವ್ಯಾಪಾರಸ್ಥರು ಕಳೆದ 4 ತಿಂಗಳುಗಳಿಂದ ದೂಳಿನಲ್ಲೇ ಕಾಲಕಳೆಯುವಂತಾಗಿದೆ. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಜಿಲ್ಲಾಡಳಿತ, ಸಂಸದರು , ಸಚಿವರು, ಶಾಸಕರು ನೀಡಿರುವ ಎಲ್ಲಾ ಭರವಸೆಗಳು ಸುಳ್ಳಾಗಿವೆ. ಸಂಸದೆ ಶೋಭಾ ಕರಂದ್ಲಾಜೆಯವರ ದಿವ್ಯ ನಿರ್ಲಕ್ಷ್ಯವೇ ಇದಕ್ಕೆಲ್ಲಾ ಕಾರಣ .ಆಮೆಗತಿಯಲ್ಲಿ ನಡೆಯುತೀರುವ ಕಾಮಗಾರಿಯ ವೇಗ ಹೆಚ್ಚಿಸಬೇಕು. ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣ ಗೊಳಿಸಬೇಕು ಇಲ್ಲವಾದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ತಿಳಿಸಿದ್ದಾರೆ. ಕುಂದಾಪುರದಲ್ಲಿ ಚತುಷ್ಪಥ ಯೋಜನೆಯಲ್ಲಿ ಪಾದಚಾರಿಗಳನ್ನು ಮರೆತು ಬಿಟ್ಟಂತೆ ಇದೆ. ಕಿರಿದಾದ ಸರ್ವೀಸ್ ರಸ್ತೆಯಲ್ಲಿಯೇ ಎಲ್ಲ ವಾಹನಗಳು ಅವಲಂಬಿಸಿವೆ. ಈ ನಡುವೆ ಪಾದಚಾರಿಗಳಿಗೆ ತಿರುಗಾಡಲು ಸೂಕ್ತ ಮಾರ್ಗವೇ ವ್ಯವಸ್ಥಿತವಾಗಿಲ್ಲ. ಕೆಲವೆಡೆ ಸ್ಲ್ಯಾಬ್ ತೆರೆದಿವೆ. ಇನ್ನೂ ಕೆಲವಡೆ ಗೂಡಂಗಡಿಗಳು ಪುಟ್ಪಾತ್ನ್ನು ಆಕ್ರಮಿಸಿಕೊಂಡಿವೆ.ಹಾಗಾಗಿ ಪಾದಚಾರಿಗಳು ಅನಿವಾರ್ಯವಾಗಿ ಸರ್ವೀಸ್ ರಸ್ತೆಯಲ್ಲಿಯೇ ನಡೆದಾಡಬೇಕಾದ ಅನಿರ್ವಾತೆ ಸೃಷ್ಟಿಯಾಗಿದೆ . ಶಾಲಾ ಮಕ್ಕಳಿಗೆ ಮತ್ತು ಹಿರಿಯ ನಾಗರಿಕರಿಗೆ ನಡೆದಾಡಲು ಕಷ್ಟವಾಗುತ್ತಿದೆ. ಉಪ ವಿಭಾಗ ಕೇಂದ್ರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಇಷ್ಟೆಲ್ಲಾ ಅವ್ಯವಸ್ಥೆಗಳಿದ್ದರೂ ಸಂಸದೆ ದಿಧ್ಯ ನಿರ್ಲಕ್ಷ್ಯ ವಹಿಸಿರುವುದು ಖಂಡನಿಯ ಎರಡು ಮೂರು ತಿಂಗಳಿಗೊಮ್ಮೆ ಬಂದು ರಾಷ್ಟ್ರೀಯ ಹೆದ್ದಾರಿ ಕುರಿತು ಕಾಟಾಚಾರದ ಸಭೆ ನಡೆಸುವ ಬದಲು ಬದ್ಧತೆ ಪ್ರದರ್ಶಿಸಲಿ. |