ನಿರಂತರ್ ಉದ್ಯಾವರ: ವಾರ್ಷಿಕ ಮಹಾಸಭೆ – ನೂತನ ಕಾರ್ಯಕಾರಿ ಸಮಿತಿ ಅಸ್ತಿತ್ವಕ್ಕೆ
ಉಡುಪಿ : ಕೊಂಕಣಿ, ಕಲೆ, ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 3 ವರ್ಷಗಳ ಹಿಂದೆ ಆರಂಭವಾದ ನಿರಂತರ್ ಉದ್ಯಾವರ ಸಂಸ್ಥೆಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಟೀವನ್ ಕುಲಾಸೊ ವಹಿಸಿದ್ದರು.
ಕಾರ್ಯದರ್ಶಿ ಮೈಕಲ್ ಡಿಸೋಜ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ರೋಷನ್ ಕ್ರಾಸ್ತ ವಾರ್ಷಿಕ ಲೆಕ್ಕಪತ್ರ ಸಭೆಗೆ ತಿಳಿಸಿದರು. ಬಳಿಕ ನೂತನ ಕಾರ್ಯಕಾರಿ ಸಮಿತಿಯ ಚುನಾವಣೆ ನಡೆಯಿತು. 2021ನೇ ಸಾಲಿನ ಅಧ್ಯಕ್ಷರಾಗಿ ಸ್ಟೀವನ್ ಕುಲಾಸೊ ಉದ್ಯಾವರ ಪುನರಾಯ್ಕೆಯಾದರೆ, ಕಾರ್ಯದರ್ಶಿಯಾಗಿ ಒಲಿವಿರಾ ಮತಾಯಸ್, ಕೋಶಾಧಿಕಾರಿಯಾಗಿ ರೋಶನ್ ಕ್ರಾಸ್ತಾ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಸುನೀಲ್ ಡಿಸೋಜ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಜುಲಿಯಾ ಡಿಸೋಜಾ, ಮಾಧ್ಯಮ ಕಾರ್ಯದರ್ಶಿಯಾಗಿ ಅನಿಲ್ ಡಿಸೋಜಾ ಆಯ್ಕೆಯಾದರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮೈಕಲ್ ಡಿಸೋಜ, ರೊನಾಲ್ಡ್ ಡಿಸೋಜ, ಸವಿತಾ ಡಿಸೋಜಾ, ಜುಡಿತ್ ಪಿರೇರಾ, ಸಿಂಥಿಯಾ ನೊರೊನ್ಹ, ರೋಶನ್ ಡಿಸೋಜಾ ಆಯ್ಕೆಯಾದರೆ, ಗೌರವ ಸದಸ್ಯರಾಗಿ ಆಲ್ವಿನ್ ಡಿಸೋಜಾ, ತಿಯಾದೊರ್ ಪಿರೇರಾ, ವಿಕ್ಟರ್ ಮಥಾಯಸ್ ಆಯ್ಕೆಯಾಗಿದ್ದಾರೆ.