ಪಕ್ಷದ ಬೆಳವಣಿಗೆ, ಶಾಸಕರ ವರ್ತನೆ ಬೇಸರ ತರಿಸಿದೆ: ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ: ಇತ್ತೀಚೆಗಿನ ಪಕ್ಷದ ಬೆಳವಣಿಗೆ, ಶಾಸಕರ ವರ್ತನೆ ಬೇಸರ ತರಿಸಿದೆ ಎಂದು ಗ್ರಾಮೀಣ ಅಭಿವೃದ್ಧಿ ಸಚಿವ ಕೆ. ಎಸ್ ಈಶ್ವರಪ್ಪ ಹೇಳಿದ್ದಾರೆ. ಈ ಬಗ್ಗೆ ಇಂದು ಮಾತನಾಡಿರುವ ಅವರು, ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಅನೇಕರಿಗೆ ಅಸಮಾಧಾನ ಇರುವುದು ಸತ್ಯ, ಅದನ್ನು ಸಪಡಿಸಿಕೊಳ್ಳಲು ಅದರದ್ದೇ ಆದ ವ್ಯವಸ್ಥೆ ಇದೆ ಅದನ್ನು ಅಲ್ಲಿಯೇ ಸರಿಪಡಿಸಿಕೊಳ್ಳಬೇಕು.

ಅದನ್ನು ಬಿಟ್ಟು ಹಾದಿ ಬೀದಿಯಲ್ಲಿ ಮಾತನಾಡಿದರೆ ಸಮಸ್ಯೆ ಬಗೆಹರಿಯುತ್ತದೆಯೇ” ಎಂದು ಹೇಳಿದ್ದಾರೆ. ಈ ಬಗ್ಗೆ ಮಾತು ಮುಂದುವರೆಸಿರುವ ಅವರು, ಬಿಜೆಪಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆ ಮತ್ತು ಶಾಸಕರ ವರ್ತನೆ ನನಗೆ ಬೇಸರ ತರಿಸಿದೆ, ಕೇವಲ ಮಂತ್ರಿಯಾಗಬೇಕೆಂಬ ಆಸೆಯಿಂದ ರಾಜಕಾರಣಿಯಾಗುವುದು ಸರಿಯಲ್ಲ, ಈ ರೀತಿ ಸಮಸ್ಯೆಯನ್ನು ಉಂಟು ಮಾಡುತ್ತಿರುವವರ ವಿರುದ್ಧ ಮುಂದಿನ ದಿನದಲ್ಲಿ ಪಕ್ಷ ಶಿಸ್ತು ಕ್ರಮ ತೆಗೆದುಕೊಳ್ಳಬಹುದು, ಆದರೆ ನಮ್ಮದೆ ಪಕ್ಷದವರ ಮೇಲೆ ಶಿಸ್ತು ಕ್ರಮ ಜರುಗಿಸುವುದು ಕೂಡ ಸರಿಯಾಗುವುದಿಲ್ಲ” ಎಂದರು.

Leave a Reply

Your email address will not be published. Required fields are marked *

error: Content is protected !!