ನಾಲಿಗೆ ಕಳೆದುಕೊಂಡ ನಾಯಕ ಬಿಎಸ್ ವೈ, ದಾರಿ ತಪ್ಪಿದ ಮಗ ವಿಜಯೇಂದ್ರ: ಎಚ್. ವಿಶ್ವನಾಥ

ಹುಬ್ಬಳ್ಳಿ: ಸಂಪುಟ ವಿಸ್ತರಣೆ ಬಳಿಕ ರಾಜ್ಯ ರಾಜಕಾರಣದಲ್ಲಿ ಅಸಮಾಧಾನಗಳು ತಲೆ ಎತ್ತತೊಡಗಿದೆ. ಇದೀಗ ತಮಗೆ ಸಚಿವ ಸ್ಥಾನ ಕೈತಪ್ಪಿರುವ ಕುರಿತು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ ಅಸಮಾಧಾನ ಹೊರ ಹಾಕಿದ್ದು ಸಿಎಂ ಬಿಎಸ್ ವೈ ವಿರುದ್ದ ಟೀಕಾಪ್ರಹಾರ ಆರಂಭಿಸಿದ್ದಾರೆ. ಯಡಿಯೂರಪ್ಪ ಅವರ ಈಗಿನ ಪರಿಸ್ಥಿತಿ ನೋಡಿದರೆ ನಾಲಿಗೆ ಕಳೆದುಕೊಂಡ ನಾಯಕ, ದಾರಿ ತಪ್ಪಿದ ಮಗ ಎಂದು ತಲೆಬರಹ ಕೊಡಬಹುದು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ ಟೀಕಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ನಾನು ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿಲ್ಲ, ಆವತ್ತು ನಡೆದಂತಹ ಮಾತುಕತೆ ಹಾಗೂ ನಡವಳಿಕೆ ಯಾವುದೇ ಪಕ್ಷದಲ್ಲಿ ಉಳಿದಿಲ್ಲ. ಯಾವುದೇ ನಾಯಕರು ಮಾತು ಉಳಿಸಿಕೊಳ್ಳತ್ತಿಲ್ಲ ಎಂಬ ನೋವಿದೆ. ಯಡಿಯೂರಪ್ಪನವರು ನನಗೆ ಯಾಕೆ ಸಚಿವ ಸ್ಥಾನ ಕೊಟ್ಟಿಲ್ಲಾ ಎನ್ನುವುದನ್ನು ಅವರೇ ಹೇಳಬೇಕು.

ನಮಗೆ ಏನೂ ಮಾತು ಕೊಟ್ಟಿದ್ದರು ಎಂಬುದು ಅವರು ಬಹಿರಂಗ ಪಡಿಸಲಿ. ನಾನು ಯಾವುದೇ ರೀತಿ ಬಂಡಾಯ ಏಳುವ ಮಾತೇ ಇಲ್ಲ ಎಂದರು.ಯಡಿಯೂರಪ್ಪ ಅವರ ಜೀವ ಅವರ ಮಗ ವಿಜಯೇಂದ್ರನ ಕೈಯಲ್ಲಿದೆ ಎಂದಿರುವ ಅವರು, ಜ. 17ರಂದು ಕೇಂದ್ರ ಗೃಹ ಸಚಿವ ಅಮಿತ ಶಾ ಭೇಟಿಗೂ ಅವಕಾಶ ಕೇಳಿದ್ದೇನೆ. ಅವಕಾಶ ಕೊಟ್ಟರೆ ರಾಜ್ಯದ ಪರಿಸ್ಥಿತಿ ಗಮನಕ್ಕೆ  ಅವರ ತರುವೆ. ಪಕ್ಷದ ವಿರುದ್ಧ ನನ್ನ ಹೋರಾಟವಲ್ಲ ಬದಲಾಗಿ ನನ್ನ ಹೋರಾಟ ನಾಯಕರ ದುರಂಹಕಾರ ವಿರುದ್ಧವಾಗಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!