ಮುಕ್ಕ-ಸಸಿಹಿತ್ಲು ಫಿಶ್‌ಮಿಲ್‌ ಸ್ಥಳಾಂತರಕ್ಕೆ ಒತ್ತಾಯ

ಮಂಗಳೂರು: ‘ಸುರತ್ಕಲ್‌ ಬಳಿಯ ಮುಕ್ಕ ಹಾಗೂ ಸಸಿಹಿತ್ಲು ಕಡಲತೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಚ್‌.ಕೆ ಬಾವಾ ಫಿಶ್‌ಮೀಲ್‌ ಇಂಡಸ್ಟ್ರೀಸ್, ಮುಕ್ಕ ಫಿಶ್‌ಮೀಲ್‌ ಇಂಡಸ್ಟ್ರೀಸ್‌ ಮತ್ತು ಬಾವಾ ಎಚ್‌ಕೆಎ ಘಟಕಗಳಿಂದ ಹೊರಬರುತ್ತಿರುವ ಮಾಲಿನ್ಯದಿಂದ ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಪಾಲಿಸದ ಈ ಘಟಕಗಳನ್ನು ಜಿಲ್ಲಾಡಳಿತ ಬೇರೆಡೆಗೆ ಸ್ಥಳಾಂತರಿಸಬೇಕು’ ಎಂದು ಸ್ಥಳೀಯ ನಿವಾಸಿ ಪ್ರತಿಮಾ ಶೆಟ್ಟಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ದಿನದ 24 ಗಂಟೆಯೂ ನಿರಂತರವಾಗಿ ಕಾರ್ಯನಿರ್ವಹಿಸುವ ಈ ಘಟಕಗಳಿಂದ ಹೊರಬರುವ ದಟ್ಟ ಹೊಗೆ, ಕಲುಷಿತ ನೀರು, ಧೂಳು ಮತ್ತು ದುರ್ವಾಸನೆಯಿಂದ ಸ್ಥಳೀಯರು ನರಕಯಾತನೆ ಅನುಭವಿಸುವಂತಾಗಿದೆ’ ಎಂದು ದೂರಿದರು.

ಅನ್ಯ ಕೆಲಸದ ನಿಮಿತ್ತ ಈ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರನ್‌ ಅವರಿಗೂ ಇಲ್ಲಿನ ನಿವಾಸಿಗಳು ಅನುಭವಿಸುತ್ತಿರುವ ಸಮಸ್ಯೆ
ಗಳ ನೈಜ ದರ್ಶನವಾಗಿದೆ. ಮಾರ್ಚ್‌ ಅಂತ್ಯದೊಳಗೆ ಈ ಘಟಕಗಳನ್ನು ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ಸ್ಥಳಾಂತರಿಸಲು ಕ್ರಮ ವಹಿಸುವುದಾಗಿ ಹೇಳಿದ್ದಾರೆ. ಅಲ್ಲಿಯವರೆಗೆ ಈ ಘಟಕಗಳ ಕಾರ್ಯನಿರ್ವಹಣೆಯನ್ನು ರಾತ್ರಿ
ವೇಳೆ ನಿಲ್ಲಸಬೇಕು. ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಮಾತ್ರ ಕಾರ್ಯನಿರ್ವಹಣೆಗೆ ಅವಕಾಶ ನೀಡಬೇಕು’ ಎಂದರು.

Leave a Reply

Your email address will not be published. Required fields are marked *

error: Content is protected !!