ಉಡುಪಿ: ಜ.15ರಂದು ಎಸ್‌ಎಸ್‌ಎಲ್‌ಸಿ ವಿಜ್ಞಾನ ವಿಷಯದ ಫೋನ್ ಇನ್

ಉಡುಪಿ: ಕೊರೋನಾ ಹಿನ್ನೆಲೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶೈಕ್ಷಣಿಕೆ ಕಲಿಕೆಗೆ ತೊಡಕುಂಟಾಗಿತ್ತು. ಇದೀಗ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಬಲವರ್ಧನೆಗಾಗಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಫೋನ್ ಇನ್ ಕಾರ್ಯಕ್ರಮವು ಜ. 15ರಂದು ಸಂಜೆ 5 ಗಂಟೆಯಿಂದ ರಾತ್ರಿ 7 ಗಂಟೆ ವರೆಗೆ ಉಡುಪಿಯ ಸರಕಾರಿ ಪ್ರೌಢ (ಬೋರ್ಡ)ಶಾಲೆಯಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದ ಮೂಲಕ ಜಿಲ್ಲೆಯ ಎಲ್ಲಾ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ವಿಜ್ಞಾನ ವಿಷಯಕ್ಕೆ ಸಂಬಂಧಿಸಿ ಕಲಿಕಾ ಸಮಸ್ಯೆಗಳಿಗೆ ಕರೆ ಮಾಡಿ ಪರಿಹಾರ ಪಡೆಯಬಹುದಾಗಿದೆ. ಅಲ್ಲದೆ  ಪಾಲಕರು, ಸಾರ್ವಜನಿಕರೂ ಸಹ ಡಿಡಿಪಿಐ ನಂಬರ್‌ಗೆ ಕರೆ ಮಾಡಿ  ಪರೀಕ್ಷಾ ಸಿದ್ಧತೆ, ಮತ್ತಿತರ ಶೈಕ್ಷಣಿಕ ಸಮಸ್ಯೆಗಳಿಗೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಬಹುದಾಗಿ.

ಈ ವಾರ ನಡೆಯುವ ಫೋನ್ ಇನ್ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಪಂಚಾಯತ್ ಸಿಇಓ ಡಾ.ನವೀನ್ ಭಟ್ ಭಾಗವಹಿಸಲಿದ್ದು, ಅವರು ಮಕ್ಕಳ ಕರೆಗಳನ್ನು ಸ್ವೀಕರಿಸಿ ಮಕ್ಕಳಿಗೆ ಉತ್ತಮ ಕಲಿಕೆಗೆ ಅತ್ಯುತ್ತಮ ಸಲಹೆಗಳನ್ನು ನೀಡಲಿದ್ದಾರೆ. ಕಾರ್ಯಕ್ರಮದ ಸಂಯೋಜಕರು ಡಿಡಿಪಿಐ ಎನ್. ಎಚ್. ನಾಗೂರ ಮತ್ತು ಉಡುಪಿ ಬಿಇಓ ಮಂಜುಳಾ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. 

ಇನ್ನು ಈ ವಾರದ ಫೋನ್ ಇನ್ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ಎಸ್ ಎಸ್ ಎಲ್ ಸಿ ವಿಜ್ಞಾನ ವಿಷಯದ ಸಮಸ್ಯೆಗಳಿಗೆ ಕರೆ ಮಾಡಬೇಕಾದ ದೂರವಾಣಿ ಸಂಖ್ಯೆಗಳು:-ದೀಪಾ ಹೆಜಮಾಡಿ – 8618240682, ರಜನಿ ಉಡುಪ – 9880784064,
ವಿನೋದ – 9743577651
ನವ್ಯಾ – 9008417909 
ನಾಗೇಂದ್ರ ಪೈ- 9886118891
ಮಿಲ್ಟನ ಕ್ರಸ್ಟಾ- 9481144081
ನಯನಾ – 9481842173
ಪರೀಕ್ಷಾ ಸಿದ್ಧತೆ, ಮತ್ತಿತರ ಪ್ರಶ್ನೆಗಳನ್ನು ಕೇಳುವುದಾದರೆ :-
ಡಿಡಿಪಿಐ ನಂಬರ್- 94489 99353 ಉಡುಪಿ ಬಿಇಓ ನಂಬರ್ – 9480695376 ಈ ನಂಬರಿಗೆ ಸಂಪರ್ಕಿಸುವಂತೆ ಸಾರ್ವಜನಿಕ ಶೀಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2 thoughts on “ಉಡುಪಿ: ಜ.15ರಂದು ಎಸ್‌ಎಸ್‌ಎಲ್‌ಸಿ ವಿಜ್ಞಾನ ವಿಷಯದ ಫೋನ್ ಇನ್

Leave a Reply

Your email address will not be published. Required fields are marked *

error: Content is protected !!