ಡಿಕೆಶಿ, ಈಶ್ವರ ಖಂಡ್ರೆ, ಅಹಮದ್ ಸಲೀಂ ಪ್ರಯಾಣಿಸುತ್ದಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತಿತರ ಕಾಂಗ್ರೆಸ್ ಮುಖಂಡರು ದಾವಣಗೆರೆಯಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದ ಹೆಲಿಕಾಪ್ಟರ್ ಪ್ರತಿಕೂಲ ಹವಾಮಾನದಿಂದಾಗಿ ನೆಲಮಂಗಲದ ಟಿ. ಬೇಗೂರು ಬಳಿ ಶುಕ್ರವಾರ ಸಂಜೆ ಸುರಕ್ಷಿತವಾಗಿ ತುರ್ತು ಭೂಸ್ಪರ್ಶವಾಗಿದೆ.

ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್ ಹಾಗೂ ಎಂಎಲ್ಸಿ ಯು.ಬಿ. ವೆಂಕಟೇಶ್ ಅವರು ಮಧ್ಯಾಹ್ನ ದಾವಣಗೆರೆಯಲ್ಲಿ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅವರು ಆಯೋಜಿಸಿದ್ದ ಕೋವಿಡ್ ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದರು.

ಆದರೆ ವಿಪರೀತ ಮಳೆಯ ಕಾರಣ ಪ್ರತಿಕೂಲ ಹವಾಮಾನದಿಂದಾಗಿ ಅವರಿದ್ದ ಹೆಲಿಕಾಪ್ಟರ್ ಇಳಿಯಲು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಅನುಮತಿ ಲಭ್ಯವಾಗಲಿಲ್ಲ. ಹೀಗಾಗಿ ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರಿದ್ದ ಹೆಲಿಕಾಪ್ಟರ್ ನೆಲಮಂಗಲದ ಟಿ. ಬೇಗೂರು ಬಳಿ 4 ಗಂಟೆ ಸುಮಾರಿಗೆ ಸುರಕ್ಷಿತವಾಗಿ ಧರೆಗಿಳಿಯಿತು.

ನಾವು ಎಚ್‌ಎಎಲ್‌ನಲ್ಲಿ ಇಳಿದು ನೇರವಾಗಿ ರಾಜ ಭವನಕ್ಕೆ ಹೋಗಬೇಕಿತ್ತು. ಆದರೆ, ಬೆಂಗಳೂರಿಗೆ ಸಮೀಪಿಸುತ್ತಿರುವಾಗ, ಭಾರೀ ಮಳೆ ಮತ್ತು ತೀವ್ರ ಗಾಳಿಯಿಂದಾಗಿ ಇಳಿಯುವುದು ಅಸುರಕ್ಷಿತ ಎಂದು ಪೈಲಟ್ ನಮಗೆ ಮಾಹಿತಿ ನೀಡಿದರು. ನಾವು ನಂತರ ನೆಲಮಂಗಲಕ್ಕೆ ಬಳಸುದಾರಿಯನ್ನು ತೆಗೆದುಕೊಂಡು ರಸ್ತೆ ಮೂಲಕ ಬೆಂಗಳೂರಿಗೆ ಪ್ರಯಾಣಿಸಬೇಕಾಯಿತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀ ಅಹ್ಮದ್ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!