ಮಲ್ಪೆ: ಮಾಹಿತಿ ಸೇವಾ ಕೇಂದ್ರ ಫಲಕ ಹಾಗೂ ರಸ್ತೆ ಸುರಕ್ಷಾ ದರ್ಪಣ ಅಳವಡಿಕೆ
ಮಲ್ಪೆ: ಬೈಲಕೆರೆ ಯುವಕ ಮಂಡಲ ವತಿಯಿಂದ ಮಾಹಿತಿ ಸೇವಾ ಕೇಂದ್ರ ಹಾಗೂ ರಸ್ತೆ ಸುರಕ್ಷಾ ದರ್ಪಣ ಅಳವಡಿಕೆ ಕಾರ್ಯಕ್ರಮ ಬೈಲಕೆರೆ ಸೇವಾ ಕೇಂದ್ರದ ಕಛೇರಿಯಲ್ಲಿ ರವಿವಾರ ನಡೆಯಿತು.
ಕಾರ್ಯಕ್ರಮದಲ್ಲಿ ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ, ಉಡುಪಿ ತಾ.ಪಂ. ಕಾರ್ಯನಿರ್ವಣಾಧಿಕಾರಿ ಮೋಹನ್ ರಾಜ್, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ, ಡಾ.ಪ್ರೀಮಾ ಲವೀನ, ಅಂಗನವಾಡಿ ಶಿಕ್ಷಕಿ ಸುನೀತಾ, ಆಶಾಕಾರ್ಯಕರ್ತೆ ಲೀಲಾ, ಯುವಕ ಮಂಡಲ ಅಧ್ಯಕ್ಷರು ಶ್ರೀಜಿತ್ ಬೈಲಕೆರೆ ಉಪಸ್ಥಿತರಿದ್ದರು.
ಬೈಲಕೆರೆ ಯುವಕ ಮಂಡಲದ ಸೇವಾ ಮಾಹಿತಿ ಕೇಂದ್ರದಲ್ಲಿ ಸರಕಾರದ ಯೋಜನೆಗಳ ಮಾಹಿತಿ ಹಾಗು ಸಂಭಂದ ಪಟ್ಟ ದಾಖಲಾತಿಗಳ ಮಾಹಿತಿ ಒದಗಿಸಿ ಜನರನ್ನು ವಿವಿದ ಕಛೇರಿಗಳಿಗೆ ಹೋಗಿ ಮಾಹಿತಿ ಪಡೆಯಲು ಜನರ ಹಣ, ಸಮಯವನ್ನು ಉಳಿಸಲು ಸಂಘ ಮಾಡಿರುವ ಕಾರ್ಯ ಸಾರ್ವಜನಿಕ ವಲಯದಲ್ಲಿ ಮುಕ್ತ ಪ್ರಶಂಸೆಗೆ ಒಳಗಾಗಿದೆ.