ಬ್ರಹ್ಮಾವರ: ಹೊಳೆಯಲ್ಲಿ ಮುಳುಗಿ ಮೃತ್ಯು
ಬ್ರಹ್ಮಾವರ: ಹೊಳೆ ನೀರಿನಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬ್ರಹ್ಮಾವರದ ಮೂಡುತೋಟ ಸೀತಾನದಿಯ ಹೊಳೆಯಲ್ಲಿ ನಡೆದಿದೆ. ಲಕ್ಷ್ಮಣ (44) ನೀರಿನಲ್ಲಿ ಮುಳುಗಿ ಮೃತಪಟ್ಟವರು.
ಇವರು ಜ.12ರಂದು ತಮ್ಮ ಸಂಬಂಧಿಕರಾದ ಕೀರ್ತನ್, ವಿಕ್ರಮ್, ವೀಕ್ರಾಂತ್, ಸುದೀಪ್ ರವರೊಂದಿಗೆ ಮನೆಯ ಹತ್ತಿರದ ಮೂಡುತೋಟ ಸೀತಾನದಿಯ ಹೊಳೆ ಕಡೆಗೆ ಹೋಗಿದ್ದರು.
ಹೊಳೆಯಲ್ಲಿ ಮೊಳಿಯನ್ನು ಹೆಕ್ಕಿಕೊಂಡು ವಾಪಾಸ್ಸು ಬರುವ ಸಲುವಾಗಿ ಹೊಳೆಯ ಒಂದು ಬದಿಯಿಂದ ಇನ್ನೊಂದು ಬದಿಯ ದಂಡೆಗೆ ಬರುವಾಗ ಹೊಳೆಯ ನೀರು ಏರಿತವಾಗಿ ಈಜು ಬಾರದ ಲಕ್ಷ್ಮಣರವರು ನೀರಿನಲ್ಲಿ ಮುಳುಗಿದ್ದರು. ಬಳಿಕ ಮಧ್ಯಾಹ್ನ 2 ಗಂಟೆ ಸುಮಾರಿಗೆ ಲಕ್ಷ್ಮಣ ಅವರು ಮತದೇಹ ಪತ್ತೆಯಾಗಿದ್ದು ಅವರು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತ ಪಟ್ಟಿರುವುದಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.