ಉಡುಪಿ: ಪಾರ್ಕಿಂಗ್ ಮಾಡಿದ್ದ ಕಾರಿನ ಗಾಜು ಹೊಡೆದು ಕಳವು
ಉಡುಪಿ: ಪಾರ್ಕಿಂಗ್ ಮಾಡಿದ್ದ ಕಾರಿನ ಗಾಜು ಹೊಡೆದು ಅಪಾರ ಪ್ರಮಾಣದ ಸ್ವತ್ತುಗಳನ್ನು ದೋಚಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ನಾಗರಾಜ ಕೋಟ್ಯಾನ್(39 ) ಇವರು ಅಂಗಡಿಯೊಂದನ್ನು ನಡೆಸುತ್ತಿದ್ದು, ನಿನ್ನೆ(ಜ.11) ಅಂಗಡಿ ಪಕ್ಕದಲ್ಲಿ ತಮ್ಮ ಕಾರನ್ನು ನಿಲ್ಲಿಸಿ ಕೆಲಸದ ಸಲುವಾಗಿ ಮಣಿಪಾಲಕ್ಕೆ ತೆರಳಿದ್ದರು. ಸಂಜೆ ತಮ್ಮ ಕೆಲಸ ಮುಗಿಸಿ ಬಂದು ನೋಡಿದಾಗ ಕಾರಿನಲ್ಲಿ ಕಳವಾಗಿರುವುದು ತಿಳಿದು ಬಂದಿದೆ.
ಕಾರು ನಿಲ್ಲಿಸಿದ್ದ ಸಮಯದಲ್ಲಿ ಯಾರೋ ಕಳ್ಳರು ಬಂದು ಕಾರಿನ ಬಾಗಿಲಿನ ಗಾಜು ಒಡೆದು ಮುಂದಿನ ಸೀಟಿನಲ್ಲಿ ಇಟ್ಟಿದ್ದ ಬ್ಯಾಗ್ ಪ್ಯಾಕ್ ನಲ್ಲಿದ್ದ 24,000 ರೂ ಮೌಲ್ಯದ 1 ತಾಯತ, 22,000 ರೂ ನಗದು, ಮೊಬೈಲ್ ಚಾರ್ಜರ್ ಮತ್ತು ಬಟ್ಟೆಗಳನ್ನು ಕಳವುಗೈದಿದ್ದಾರೆ. ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ 47,000 ರೂ. ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.