ಅಕ್ರಮ ಮರಳು ದಂಧೆಗೆ ಸಹಕರಿಸಿದ ಅಧಿಕಾರಿಗಳ ಮಂಪರು ಪರೀಕ್ಷೆ ನಡೆಸಿ: ಕೆಆರ್ ಸಿ
ಉಡುಪಿ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಉಪಾಧ್ಯಕ್ಷ ಅಮೃತ್ ಶೆಣೈಯವರ ನೇತೃತ್ವದಲ್ಲಿ ಪಕ್ಷದ ನಿಯೋಗ ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ಉಡುಪಿ ಸ್ವರ್ಣಾ ನದಿಯಲ್ಲಿ ಹೂಳೆತ್ತುವ ನೆಪದಲ್ಲಿ ಅವ್ಯಾಹತವಾಗಿ ಮರಳನ್ನು ಅಕ್ರಮವಾಗಿ ಸಾಗಾಟ ಮಾಡಿದ್ದಾರೆ.
ಇತ್ತೀಚೆಗೆ ಅಧಿಕಾರಿಗಳು ಸ್ಥಳಕ್ಕೆ ದಾಳಿ ಮಾಡಿ ಕೆಲವು ವಾಹನಗಳನ್ನು ವಶಕ್ಕೆ ಪಡೆದು, ಸಂಗ್ರಹಿಸಿದ ಮರಳನ್ನು ವಶಪಡಿಸಿಕೊಂಡು ಕೆಲವು ಜನರ ಮೇಲೆ ಪ್ರಕರಣ ದಾಖಲಿಸಿತ್ತು, ಉಡುಪಿ ಜಿಲ್ಲಾಧಿಕಾರಿ ನಂತರ ಕೊಟ್ಟ ಹೇಳಿಕೆಯಲ್ಲಿ ಕೆಲವು ಅಧಿಕಾರಿಗಳನ್ನು ಅಮಾನತು ಮಾಡುವಂತೆ ಶಿಫಾರಸು ಮಾಡಲಾಗಿತ್ತು ಹೇಳಿದ್ದರು .
ಸಹಕರಿಸಿದ ಅಧಿಕಾರಿಗಳನ್ನು ಅಮಾನತು ಮಾಡಿದರೆ ಸಾಲದು , ಸಂಬಂಧಿಸಿದ ಎಲ್ಲರನ್ನೂ ಬಂಧಿಸಿ ಮಂಪರು ಪರೀಕ್ಷೆ ನಡೆಸಿ ಪ್ರಕರಣದ ಸಮಗ್ರ ತನಿಖೆ ನಡೆಸಬೇಕೆಂದು ಮನವಿ ನೀಡಿತು. ಅಮೃತ್ ಶೆಣೈಯವರು ಸಚಿವರಲ್ಲಿ ಕಳೆದ ನಾಲ್ಕು ವರ್ಷಗಳಿಂದ ಉಡುಪಿ ಜಿಲ್ಲೆಯ ಜನ ಮರಳಿನ ಅಭಾವದಿಂದ ನಷ್ಟಕ್ಕೊಳಪಟ್ಟಿದ್ದಾರೆ ಎಂಬ ವುಚಾರವನ್ನೂ ಇದೇ ಸಂದರ್ಭದಲ್ಲಿ ತಿಳಿಸಿದರು.
ನಿಯೋಗದಲ್ಲಿ ಪ್ರಸಾದ ಕರ್ಕಡ, ಶಾಹಿದ ಅಲಿ, ಯಜ್ಞೇಶ ಆಚಾರ್ಯ, ರಾಮದಾಸ ಪೈ, ಪ್ರಿತೀಶ ಕುಮಾರ್, ಸಲ್ಮಾನ್ ಅಹ್ಮದ್, ದಿನೇಶರಾಮ, ಶ್ರೇಯಸ್ ಪೂಜಾರಿ ಉಪಸ್ಥಿತರಿದ್ದರು .