ಹೆರ್ಗ: ಸ್ವಣಾ೯ ನದಿ ತೀರದಲ್ಲಿ ಸ್ವರ್ಣಾರಾಧನಾ ವತಿಯಿಂದ ಸ್ವಣಾ೯ರತಿ
ಉಡುಪಿ :-ಹೆರ್ಗ ಹೊಳೆಬಾಗಿಲಿನ ಸ್ವರ್ಣಾ ನದಿಯ ತೀರದಲ್ಲಿ ಸ್ವಣಾ೯ರತಿ ಕಾಯ೯ಕ್ರಮ ಜ.11ರಂದು ನಡೆಯಿತು.
ಸ್ವಣಾ೯ ಫ್ರೆಂಡ್ಸ್ ನ ಸಹಯೋಗದಲ್ಲಿ ನಡೆದ ಈ ಕಾಯ೯ಕ್ರಮದಲ್ಲಿ ಮಾತನಾಡಿದ ಖ್ಯಾತ ವೈದಿಕರಾದ ಹೆಗ೯ ಜಯರಾಮ ತಂತ್ರಿ , ನದಿಯಲ್ಲಿ ನಾವು ದೇವರ ಸಾನಿಧ್ಯವನ್ನು ನೋಡುತ್ತೆವೆ ಹೀಗಾಗಿ ನದಿಯನ್ನು ಸ್ವಚ್ಚವಾಗಿ ಇಟ್ಟಲ್ಲಿ ದೇವರ ಸೇವೆ ಮಾಡಿದ ಪುಣ್ಯ ಬರುತ್ತದೆ. ಈ ನದಿಯು ಹಲವಾರು ಕಡೆಗಳಲ್ಲಿ ಮಾಲಿನ್ಯದಿಂದ ಕೂಡಿದೆ ನಗರಕ್ಕೆ ನೀರು ನೀಡುತ್ತಿರುವ ಈ ನದಿಯ ಸ್ವಚ್ಚತೆಗೆ ಎಲ್ಲರೂ ಪಣ ತೊಡಬೇಕಾಗಿದೆ ಎಂದರು.
ನಗರ ಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್ ನದಿಯ ತೀರದಲ್ಲಿ ಗಿಡ ನೆಟ್ಟು ಶುಭ ಹಾರೈಸಿದರು. ಕಾಯ೯ಕ್ರಮದಲ್ಲಿ ಮಾಜಿ ನಗರಸಭಾ ಅಧ್ಯಕ್ಷ ದಿನಕರ ಶೆಟ್ಟಿ ಹೆಗ೯, ವಿಠಲದಾಸ ತಂತ್ರಿ, ಮಾಜಿ ನಗರಸಭಾ ಸದಸ್ಯ ಶ್ಯಾಮ ಪ್ರಸಾದ್ ಕುಡ್ವ, ಪರ್ಯಾವರಣ ಸಂರಕ್ಷಣೆ ಸಂಯೋಜಕರಾದ ತೋನ್ಸೆ ಗಣೇಶ್ ಶೆಣೈ , ಡಾ.ಶಿವಾನಂದ ನಾಯಕ್, ಸ್ವಚ್ಛ ಭಾರತ್ ಫ್ರೆಂಡ್ಸ್ ನ ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು, ಸೀತಾರಾಮ್ ನಾಯಕ್ ನಿರಂಜನ ಪ್ರಭು,ನಗರಸಭಾ ಸದಸ್ಯೆ ಆಶ್ವಿನಿ ಪೂಜಾರಿ,ಮುಂತಾದವರು ಭಾಗವಹಿಸಿದ್ದರು.