ಹಿರಿಯಡಕ: ಸಾವಯವ ಕೃಷಿ ಮಾಹಿತಿ ಕಾರ್ಯಾಗಾರ
ಹಿರಿಯಡಕ: ಹಳೆ ವಿದ್ಯಾರ್ಥಿ ಸಂಘ ಕಾಜಾರಗುತ್ತು ಮತ್ತು ಗೆಳೆಯರ ಬಳಗ ಕಾಜಾರಗುತ್ತು ಇದರ ಜಂಟಿ ಆಶ್ರಯದಲ್ಲಿ ಸಾವಯವ ಕೃಷಿ ಮಾಹಿತಿ ಕಾರ್ಯಾಗಾರವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಜಾರಗುತ್ತುವಿನಲ್ಲಿ ನಡೆಯಿತು.
ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ದೇವೇಂದ್ರ ನಾಯಕ್ ಮುತ್ತೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀನಾಗ್, ನಿತಿನ್ ಕುಮಾರ್ ಹಾಗೂ ಜನಾರ್ಧನ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಅನಿಲ್ ಶೆಟ್ಟಿ ಮಾಂಬೆಟ್ಟು, ಶಾಲಾ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದರು.