ಸಂವಿಧಾನದ ಆಶಯವನ್ನು ಉಳಿಸಿ ಬೆಳೆಸಿ: ಜಯನ್ ಮಲ್ಪೆ
ಮಲ್ಪೆ: ಪ್ರಜಾಸತ್ತೆಯ ಮುಸುಕಲ್ಲಿ ಕೇಂದ್ರೀಕೃತ ಅಧಿಕಾರ ಕೆಲವೇ ಕೆಲವು ಪಟ್ಟಭದ್ರರ ಕೈಯಲ್ಲಿ ಸಿಕ್ಕಿಹಾಕಿಕೊಳ್ಳದೆ ಜನಪದದತ್ತ ಹರಿದು ಬರುವ ಜೊತೆಗೆ ಸಂವಿಧಾನದ ಆಶಯವನ್ನು ಉಳಿಸಿ ಬೆಳೆಸಿದರೆ ಮಾತ್ರ ಪಂಚಾತ್ ರಾಜ್ ವ್ಯವಸ್ಥೆ ಯಶಸ್ವಿಯಾಗಳು ಸಾಧ್ಯ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಅವರು ಕೆಮ್ಮಣ್ಣು ಪಡುಕುದ್ರು ಅಂಬೇಡ್ಕರ್ ಯುವಸೇನೆ ಮತ್ತು ಸಾರ್ವಜನಿಕರು ಆಯೋಜಿಸಿದ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡುತ್ತಾ. ಪಂಚಾಯತ್ ರಾಜ್ ವ್ಯವಸ್ಥೆ ಬಂದ ನಂತರ ನಿಜವಾದ ಅಧಿಕಾರ ವಿಕೇಂದ್ರೀಕರಣ ಆಗಿದೆಯೇ, ಗ್ರಾಮಗಳೇನಾದರೂ ಸ್ವಾಯತ್ತತೆ ಪಡೆಯಲು ಸಾಧ್ಯವಾಗಿದೆಯೇ. ರಾಜಕೀಯ ಕಣ್ಣಾಮುಚ್ಚಾಲೆಯಲ್ಲಿ ಪ್ರತಿ ಊರುಕೇರಿಯೂ ತೊಡಗಿಸಿಕೊಂಡಿದ್ದರೂ ಅವರು ತಮಗೇನು ಬೇಕೆನ್ನುವುದನ್ನು ಮರತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಕುದ್ರು ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷ ರಾಜೇಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಿನಕರ ಹೇರೂರು,ಜಿ.ಪ.ಸದಸ್ಯ ಜನಾರ್ಧನ ತೋನ್ಸೆ,ತಾ.ಪ.ಸದಸ್ಯೆ ಸುಲೋಚನಾ, ರಘರಾಮ್ ಶೆಟ್ಟಿ, ಟಿ.ಎಮ್.ರಹಮತುಲ್ಲ , ಕಡಂಜರು,ಅಚ್ಚುತ್ತ ಗುರಿಕಾರ,ಗೋಪಾಲ ಸುವರ್ಣ,ಶ್ಯಾಮ್ ರಾವ್, ಜೆನ್ವಿ ಪಿಂಟೋ, ಡೊರತಿ ಅಂದ್ರಾದೆ, ಪ್ರಭಾಕರ ಮೆಂಡನ್, ಪ್ರಶಾಂತ್, ಸತ್ಯನಾರಾಣ, ನಿತ್ಯಾನಂದ ಕೆಮ್ಮಣ್ಣು ಉಡುಪಿ ನಗರಸಭಾ ಸದಸ್ಯ ರಮೇಶ್ ಕಾಂಚನ್, ದಲಿತ ಮುಖಂಡ ಗಣೇಶ್ ನೆರ್ಗಿ ಮುಂತ್ತಾದವರು ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಗುರುರಾಜ್ ಭಟ್ ಮಾತನಾಡಿದರೆ, ವೆರೋನಿಕಾ ಕರ್ನೇಲಿಯೊ ಅಭಿನಂದನಾ ಭಾಷಣ ಮಾಡಿದರು.
ಸ್ವಾಗತ ಮತ್ತು ನಿರೂಪಣೆಯನ್ನುಇಂತಿಯೋಜ್ ತಿಮ್ಮಣ್ಣಕುದ್ರು, ಬಿಲಿಯಾಡ ತಮ್ಮಣ್ಣಕುದ್ರು ವಂದಿಸಿದರು.