ಗಿರಿಜಾ ಹೆಲ್ತ್ ಕೇರ್&ಸರ್ಜಿಕಲ್: ಜ.12ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ
ಉಡುಪಿ: ಗಿರಿಜಾ ಹೆಲ್ತ್ ಕೇರ್ ಆಂಡ್ ಸರ್ಜಿಕಲ್ ನ ಪ್ರಥಮ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಉಚಿತ ಆರೋಗ್ಯ ತಪಾಸಣಾ ಶಿಬಿರವು ಜ. 12 ರಂದು ಬೆಳಿಗ್ಗೆ9.30 ರಿಂದ 1 ಗಂಟೆವರೆಗೆ ಉಡುಪಿಯ ಮಿತ್ರ ಆಸ್ಪತ್ರೆಯ ಬಳಿಯ ವಾದಿರಾಜ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ.
ಈ ಶಿಬಿರವನ್ನು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಉದ್ಘಾಟಿಸಲಿದ್ದಾರೆ. ದ.ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಧುಮೇಹ ಚಿಕಿತ್ಸೆ (ಶುಗರ್), ರಕ್ತದೊತ್ತಡ( ಬಿ.ಪಿ), ನಾಡಿ ಬಡಿತ ಪರೀಕ್ಷೆ(ಪಲ್ಸ್ ರೇಟ್), ಆಮ್ಲಜನಕ ಶುದ್ಧತ ಮಟ್ಟ (ಆಕ್ಸಿಜನ್ ಸಚ್ಯುರೇಶನ್ ಲೆವೆಲ್) ಪರೀಕ್ಷೆಗಳು ಉಚಿತವಾಗಿ ನಡೆಯಲಿದೆ. ಅಲ್ಲದೆ ಉಡುಪಿ ಹಾಗೂ ಮಂಗಳೂರು ಜನತೆಗೆ ಪ್ರತೀ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಸಾರ್ವಜನಿಕರು ಈ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದು ಕೊಳ್ಳುವಂತೆ ಗಿರಿಜ ಹೆಲ್ತ್ ಕೇರ್ ಆಂಡ್ ಸರ್ಜಿಕಲ್ಸ್ ಸಂಸ್ಥೆ ತಿಳಿಸಿದೆ.