ಹನಿಟ್ರ್ಯಾಪ್ ಗೆ ಸಿಲುಕಿ ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ರವಾನಿಸುತ್ತಿದ್ದ ಭಾರತೀಯರಿಬ್ಬರ ಬಂಧನ!
ನವದೆಹಲಿ: ಪಾಕಿಸ್ತಾನದ ಹನಿಟ್ರ್ಯಾಪ್‍ಗೆ ಸಿಲುಕಿ ಗೌಪ್ಯ ಮಾಹಿತಿ ರವಾನಿಸುತ್ತಿದ್ದ ಇಬ್ಬರು ಭಾರತೀಯರನ್ನು ಮಿಲಿಟರಿ ಇಂಟೆಲಿಜೆನ್ಸ್ ಮತ್ತು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪಾಕಿಸ್ತಾನಿ ಐಎಸ್ಐ ಮೂಲದ ಯುವತಿಯ ಹನಿಟ್ರ್ಯಾಪ್ ಗೆ ಸಿಲುಕಿ ಗೌಪ್ಯ ಮಾಹಿತಿಯನ್ನು ರವಾನಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಸೇನಾ ಯುದ್ಧಸಾಮಗ್ರಿ ಡಿಪೋದಲ್ಲಿ ನಾಗರಿಕ ರಕ್ಷಣಾ ಉದ್ಯೋಗಿ ವಿಕಾಸ್ ಕುಮಾರ್(29) ಮತ್ತು ಸೇನೆಯ ನಾಗರಿಕ ಗುತ್ತಿಗೆ ಉದ್ಯೋಗಿ ಚಿಮನ್ ಲಾಲ್ (22) ಅವರನ್ನು ಬಂಧಿಸಿದ್ದಾರೆ.
ಅಧಿಕೃತ ಮೂಲಗಳು ಹೇಳುವಂತೆ, ಲಖನೌ ಮೂಲದ ಮಿಲಿಟರಿ ಇಂಟೆಲಿಜೆನ್ಸ್ (ಎಂಐ) ಒದಗಿಸಿದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್(ಐಎಸ್ಐ) ನ ಗೂಢಚಾರರಾಗಿ ಕೆಲಸ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ.
ಶ್ರೀ ಗಂಗನಗರದಲ್ಲಿನ ಮದ್ದುಗುಂಡು ಡಿಪೋ ಮತ್ತು ಬಿಕಾನೇರ್‌ನಲ್ಲಿನ ಎಂಎಂಎಫ್‌ಆರ್ ಎರಡೂ ಭಾರತದ ಪಶ್ಚಿಮ ಭಾಗದಲ್ಲಿ ಆಯಕಟ್ಟಿನ ಪ್ರಮುಖ ಮಿಲಿಟರಿ ಕೇಂದ್ರಗಳಾಗಿವೆ.
ಹಿಂದೂ ಮಹಿಳೆ ಅನೋಷ್ಕಾ ಚೋಪ್ರಾ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಬಳಿಸಿ ಮುಲ್ತಾನ್ ಮೂಲದ ಐಎಸ್ಐ ಏಜೆಂಟ್ ವಿಕಾಸ್ ಕುಮಾರ್ ರಿಂದ ಗೌಪ್ಯ ಮಾಹಿತಿಗಳನ್ನು ತರಿಸಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.