‘ಗ್ಯಾಲಕ್ಸಿ ಸ್ಪೋರ್ಟ್ಸ್ ವರ್ಲ್ಡ್’ ಬೆಳ್ಳಿ ಹಬ್ಬದ ಸಂಭ್ರಮ: ಕ್ರೀಡೋಪಕರಣ ಖರೀದಿಗೆ ಶೇ.60 ರಿಯಾಯಿತಿ

ಉಡುಪಿ: ಕರಾವಳಿಯ ಪ್ರಸಿದ್ಧ ‘ಗ್ಯಾಲಕ್ಸಿ ಸ್ಪೋರ್ಟ್ಸ್ ವರ್ಲ್ಡ್’ ಬೆಳ್ಳಿ ಹಬ್ಬದ ಸಂಭ್ರಮ. ಉಡುಪಿ, ಕುಂದಾಪುರ ಮಣಿಪಾಲದಲ್ಲಿ ತನ್ನ ಮಳಿಗೆಗಳನ್ನು ಹೊಂದಿರುವ ಗ್ಯಾಲಕ್ಸಿ ಸ್ಪೋರ್ಟ್ಸ್ ವರ್ಲ್ಡ್ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ದೊಡ್ಡ ಸ್ಪೋರ್ಟ್ಸ್ ಉಪಕರಣಗಳ ಮಳಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ 25 ವರ್ಷ ಪೂರೈಸಿರುವ ಸಂಭ್ರಮಾಚರಣೆಯ ಸಲುವಾಗಿ ಗ್ಯಾಲಕ್ಸಿ ಸ್ಪೋರ್ಟ್ಸ್ ವರ್ಲ್ಡ್ ದೇಶಾದ್ಯಂತ ಗ್ರಾಹಕರಿಗೆ ಪ್ರಥಮ ಬಾರಿಗೆ ತನ್ನದೇ ಆದ ಅ್ಯಪ್ ಒಂದನ್ನು ಡಿಸೈನ್ ಮಾಡಿದೆ.

ಈ ಆ್ಯಪ್‌ನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ Galaxysportsworld.com ಆಪ್    ಡೌನ್‌ಲೋಡ್ ಮಾಡಿಕೊಂಡು ವೆಬ್‌ಸೈಟ್ ಮತ್ತು ಆ್ಯಪ್ ಮೂಲಕ ಶೇ. 60ರಷ್ಟು ರಿಯಾಯಿತಿಯೊಂದಿಗೆ ಗ್ರಾಹಕರು ತಮಗೆ ಬೇಕಾಗಿರುವ ವಿವಿಧ ಕ್ರೀಡೋಪಕರಣಗಳು, ಟೀ ಶರ್ಟ್ಸ್, ಶೂ ಸಹಿತ ವಿವಿಧ ಸಾಮಾಗ್ರಿಗಳು, ವ್ಯಾಯಾಮ ಉಪಕರಣಗಳು ಮತ್ತು ಟ್ರೋಫಿಗಳನ್ನು ಖರೀದಿಸಬಹುದಾಗಿದೆ. 

1995 ರಲ್ಲಿ ಕುಂದಾಪುರದಲ್ಲಿ ಪ್ರಥಮ ಮಳಿಗೆಯೊಂದಿಗೆ ವ್ಯವಹಾರ ಆರಂಭಿಸಿರುವ ಗ್ಯಾಲಕ್ಸಿ ಸ್ಪೋರ್ಟ್ಸ್ ವರ್ಲ್ಡ್ ಇಂದು ಕರಾವಳಿಯಾದ್ಯಂತ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಗ್ಯಾಲಕ್ಸಿ ಸ್ಪೋರ್ಟ್ಸ್ ಗ್ರಾಹಕರ ಬೇಡಿಕೆಯ ಮೇರೆಗೆ ವಿವಿಧ ವಸ್ತುಗಳ ಖರೀದಿಯ ಮೇಲಿನ ರಿಯಾಯಿತಿ ದರದ ಕೊಡುಗೆಯನ್ನು ಜ.12ರ ವರಗೆ ವಿಸ್ತರಿಸಲಾಗಿದೆ.

ಇಲ್ಲಿ ಕರಾವಳಿಯ ವಿವಿಧ ಸರಕಾರ ಮತ್ತು ಸರಕಾರೇತರ ಸಂಸ್ಥೆಗಳು ಕಾರ್ಪೋರೇಟ್ ಸಂಸ್ಥೆಗಳು , ಶಿಕ್ಷಣ ಸಂಸ್ಥೆಗಳು ಹಾಗೂ ಯುವಕ ಯುವತಿ ಮಂಡಳಿಗಳು, ಕ್ರೀಡೆ, ಯುನಿಫಾರ್ಮ್, ವ್ಯಾಯಮ ಉಪಕರಣಗಳನ್ನು ಖರೀದಿಸುತ್ತಿದ್ದಾರೆ. ಇದರ ಜೊತೆಗೆ, ಟ್ರೋಫೀ ಮತ್ತು ಮೊಮೆಂಟೋಗಳನ್ನು ಕೂಡಾ ಬುಕ್ಕಿಂಗ್ ಮಾಡಿ ಖರೀದಿಸುತ್ತಿರುವುದು ಇಲ್ಲಿನ ವಿಶೇಷತೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಸದಾನಂದ ನಾವಡ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!