ಗಾಂಜಾ ಮಾರಾಟಕ್ಕೆ ಯತ್ನ: ಮೂವರ ಬಂಧನ
ಮಂಗಳೂರು: ನಗರದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಸುತ್ತಿದ್ದ ಮೂವರು ಆರೋಪಿಗಳನ್ನು ಕದ್ರಿ ಬಳಿ ಮಂಗಳೂರು ಇಕನಾಮಿಕ್ಸ್, ನಾರ್ಕೋಟಿಕ್ ಆ್ಯಂಡ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸಂತೋಷ್, ದಿಲೀಪ್ ನಾಗರಾವ್ ,ಇಮ್ರಾನ್ ಜುಬೈರ್ ಎಂದು ಗುರುತಿಸಲಾಗಿದೆ.
ಆರೋಪಿಗಳು ಗಾಂಜಾವನ್ನು ಮಂಗಳೂರಿನ ಕಾಲೇಜು ವಿಧ್ಯಾರ್ಥಿಗಳಿಗೆ ಮಾರಾಟ ಮಾಡಲು ಯತ್ನಿಸಿದ್ದರು ಎಂದು ತಿಳಿದು ಬಂದಿದೆ. ಬಂಧಿತರಿಂದ 75 ಸಾವಿರ ರೂ. ಮೌಲ್ಯದ 2.50 ಕೆಜಿ ಗಾಂಜಾ, ಒಂದು ಆ್ಯಕ್ಟಿವಾ ಹೋಂಡಾ ವಾಹನ, 3 ಮೊಬೈಲ್ ಫೋನ್ ಗಳು ಹಾಗೂ 1,030 ರೂ. ನಗದು ವಶಪಡಿಕೊಳ್ಳಲಾಗಿದೆ. ಸ್ವಾಧೀನಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 1,17,530 ರೂ. ಎಂದು ಅಂದಾಜಿಸಲಾಗಿದೆ.