ನವಜಾತ ಶಿಶುವನ್ನು ಇಯರ್ ಫೋನ್ ವೈರ್ ನಿಂದ ಬಿಗಿದು ಹತ್ಯೆಗೈದ ತಾಯಿ!
ಮಂಗಳೂರು: ಕಾಸರಗೋಡಿನ ಬದಿಯಡ್ಕದಲ್ಲಿ ಆಗತಾನೇ ಹುಟ್ಟಿದ ನವಜಾತ ಶಿಶುವನ್ನು ತಾಯಿಯೇ ಇಯರ್ ಫೋನ್ ವೈರ್ ನಿಂದ ಬಿಗಿದು ಕೊಲೆಗೈದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಚೆದಕ್ಕೋಲ್ ನಿವಾಸಿ ಶಾಹಿನಾ ಮಗುವನ್ನು ಕೊಂದಿರುವ ತಾಯಿ ಎಂದು ತನಿಖೆಯಿಂದ ತಿಳಿದುಬಂದಿದೆ.
2020ರ ಡಿ. 15ರಂದು ಈ ಘಟನೆ ನಡೆದಿದ್ದು, ಅಂದು ತೀವ್ರ ರಕ್ತಸ್ರಾವ ಉಂಟಾಗಿದ್ದ ಶಹಿನಾ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು ಈ ವೇಳೆ ಶಹಿನಾಳನ್ನು ಪರೀಕ್ಷೆ ನಡೆಸಿದ ವೈದ್ಯರು, ಕೆಲ ಗಂಟೆಗಳ ಹಿಂದೆ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ತಿಳಿಸಿದ್ದಾರೆ.
ಆದ್ದರಿಂದ ಶಾಹಿನಾ ಕುಟುಂಬಸ್ಥರು ಮನೆಯಲ್ಲಿ ಹುಡುಕಾಡಿದಾಗ . ಮಂಚದ ಕೆಳಗೆ ಬಟ್ಟೆಯಿಂದ ಸುತ್ತಿದ್ದ ರೀತಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಶಹಿನಾಳನ್ನು ತನಿಖೆ ನಡೆಸಿದಾಗ ಆಕೆ ಮಗುವನ್ನು ಮೊಬೈಲ್ ಇಯರ್ ಫೋನ್ ಬಳಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಈ ಹಿಂದೆ ಆಚಾರ್ಯ ತ್ರಯರಲ್ಲಿ ಒಬ್ಬರಾದ ಶ್ರೀ ಶಂಕರಾಚಾರ್ಯರು ತಮ್ಮ “ದೇವ್ಯಪರಾಧ ಕ್ಷಮಾಪನ ಸ್ತೋತ್ರ”ದಲ್ಲಿ ತಾಯಿ ಶ್ರೀ ದೇವಿಯನ್ನು ಸ್ತುತಿಸುತ್ತಾ “ಕುಪುತ್ರೋ ಜಾಯೇತ, ಕುಮಾತಾ ನ ಭವತಿ” ಎಂದು ತಾಯಿಯನ್ನು ಕುರಿತು ಪ್ರಾರ್ಥಿಸುತ್ತಾರೆ. ಆದರೆ ಈ ಘಟನೆಯನ್ನು ನೋಡಿದಾಗ ಅವರ ಅಂದಿನ ಆ ಮಾತು ತಲೆಕೆಳಗಾದಂತೆ ಭಾಸವಾಗುತ್ತದೆ. ಮಗುವು ಹೇಗೇ ಇರಲಿ ಅದರ ಪಾಲನೆ ಪೋಷಣೆಯ ಜವಾಬ್ದಾರಿಯನ್ನು ಹೊತ್ತು ಅದರ ಆಟಪಾಠಗಳಲ್ಲಿ ತನ್ನ ನೋವನ್ನು ಮರೆಸಿಕೊಳ್ಳುವ ಅಂತಹಾ ಆದರ್ಶ ತಾಯಿಯರ ಕುಲಕ್ಕೇ ಅಪವಾದ ತಂದ ಈಕೆಯ,ಈಕೆಯನ್ನು ನಡೆಸಿಕೊಂಡ ಸಮಾಜದ ಬಗ್ಗೆ ಹೇಸಿಗೆ ಎನಿಸುತ್ತದೆ.