ರಾಜ್ಯ ಮಟ್ಟದ ಕಲೋತ್ಸವ 2020: ವಿಘ್ನೇಶ್.ಆರ್.ಗಾಣಿಗ ಪ್ರಥಮ ಸ್ಥಾನ
ಉಡುಪಿ: ರಾಜ್ಯ ಮಟ್ಟದ ಕಲೋತ್ಸವ 2020 ಪ್ರೌಢಶಾಲಾ ವಿಭಾಗದ ದೃಶ್ಯಕಲೆ ಸ್ಪರ್ಧೆಯಲ್ಲಿ ಕಲ್ಯಾಣಪುರ- ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ವಿಘ್ನೇಶ್.ಆರ್.ಗಾಣಿಗ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿರುತ್ತಾನೆ.
ಮುಂದಿನ ಸ್ಪರ್ಧೆ ಇದೇ ಜನವರಿ 15ರಂದು ನಡೆಯಲಿದೆ. ವಿದ್ಯಾರ್ಥಿಯ ಸಾಧನೆಗೆ ಶಾಲಾ ಸಂಚಾಲಕರು ಮತ್ತು ಮುಖ್ಯಶಿಕ್ಷಕಿ ಅಭಿನಂದಿಸಿ ಶುಭ ಹಾರೈಸಿದ್ದಾರೆ.