ಉಡುಪಿ: ಇಶ್ನಾ ಪ್ಲೇ ಸ್ಕೂಲ್ ವತಿಯಿಂದ ”ಉಡುಪೀಸ್ ಕ್ಯೂಟ್ ಕಿಡ್” ಆನ್ಲೈನ್ ಕಾಂಟೆಸ್ಟ್
ಉಡುಪಿ: ಇಶ್ನಾ ಪ್ಲೇ ಸ್ಕೂಲ್ ವತಿಯಿಂದ “ಉಡುಪೀಸ್ ಕ್ಯೂಟ್ ಕಿಡ್” ಎನ್ನುವ ಆನ್ಲೈನ್ ಕಾಂಟೆಸ್ಟನ್ನು ಆಯೋಜಿಸಲಾಗಿದೆ. ಈ ಕಾಂಟೆಸ್ಟ್ ನಲ್ಲಿ 4 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದಾಗಿದೆ.
ಈ ಕಾಂಟೆಸ್ಟ್ ನಲ್ಲಿ ಭಾಗವಹಿಸಲು ನೀವು ನಿಮ್ಮ ಮಗುವಿನ ಫೋಟೋ ವನ್ನು ಮಗುವಿನ ಹೆಸರು, ಹುಟ್ಟಿದ ದಿನಾಂಕ, ಸ್ಥಳ , ಮೊಬೈಲ್ ನಂಬರ್ ನೊಂದಿಗೆ [email protected] ಗೆ ಕಳುಹಿಸಬೇಕು.
ಕಾಂಟೆಸ್ಟ್ ನಲ್ಲಿ ಭಾಗಿಯಾಗಲು ಉಚಿತ ರಿಜಿಸ್ಟ್ರೇಶನ್ ನಡೆಯುತ್ತಿದ್ದು ಆಸಕ್ತರು ತಮ್ಮ ಮಕ್ಕಳ ಫೋಟೋ ವನ್ನು ಈಗಾಗಲೇ ತಿಳಿಸಿದ ವಿವರಗಳೊಂದಿಗೆ ಜ. 31ರೊಳಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಈ ಕಾಂಟೆಸ್ಟ್ ನಲ್ಲಿ ವಿಜೇತ ಮಕ್ಕಳಿಗೆ ಕ್ಯಾಶ್ ಪ್ರೈಸ್ ಇರಲಿದ್ದು, ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಖಚಿತ ಉಡುಗೊರೆ ನೀಡಲಾಗುವುದು. ಮಕ್ಕಳ ಈ ಆನ್ಲೈನ್ ಸ್ಪರ್ಧೆಗೆ “ಉಡುಪಿ ಟೈಮ್ಸ್” ಮೀಡಿಯಾ ಪಾರ್ಟ್ನರ್ ಆಗಿ ಕಾರ್ಯನಿರ್ವಹಿಸಲಿದೆ. ಸ್ಪರ್ಧೆಗೆ ಭಾಗವಹಿಸಲು ಉಡುಪಿ ಜಿಲ್ಲೆಯ ಮಕ್ಕಳಿಗೆ ಮಾತ್ರ ಅವಕಾಶ. ಹೆಚ್ಚಿನ ಮಾಹಿತಿಗಾಗಿ 9741209805 ಅನ್ನು ಸಂಪರ್ಕಿಸಬಹುದಾಗಿದೆ.