ಮಣಿಪಾಲ: ಮುಂಬೈ ಉದ್ಯಮಿಗೆ 14 ಕೋಟಿ ವಂಚನೆ, ದೂರು ದಾಖಲು
ಉಡುಪಿ: ನಕಲಿ ದಾಖಲೆಗಳನ್ನು ಸೃಷ್ಠಿಸಿ ವ್ಯಕ್ತಿಯೋರ್ವರಿಗೆ ಸುಮಾರು 14.15 ಕೋಟಿ ರೂ. ವಂಚಿಸಿರುವ ಘಟನೆ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
2008ರ ನ.24ರಂದು ಮುಂಬೈ ಮೂಲದ ಸುರೇಶ್ ಭಂಡಾರಿ ಅವರ ಸಂಸ್ಥೆಯು ಉಡುಪಿಯ ಡಾ.ಕ್ಷಮಾ ಹೆಗ್ಡೆ, ಸುಧೀರ್ ಕುಮಾರ್ ಪಿ. ಹೆಗ್ಡೆ, ವಿಜಯಲಕ್ಷ್ಮೀ ಹೆಗ್ಡೆ ಅವರೊಂದಿಗೆ ಮಣಿಪಾಲದ ನಿವೇಶನವೊಂದರಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸುವ ವಿಚಾರವಾಗಿ ಕರಾರು ಪತ್ರ ಮಾಡಿಕೊಳ್ಳಲಾಗಿತ್ತು.
ಆದರೆ, ಆರೋಪಿಗಳು ಈ ಕರಾರು ಪತ್ರ ಮಾಡಿಕೊಳ್ಳುವ ಮುನ್ನ ಆ ಜಾಗದ ಬಗ್ಗೆ ಸುಳ್ಳು ದಾಖಲೆಗಳು, ನಕಾಶೆಯನ್ನು ತಯಾರು ಮಾಡಿಕೊಂಡು. ಆ ದಾಖಲೆಗಳನ್ನು ನೈಜ ದಾಖಲೆಗಳೆಂದು ಸರ್ಕಾರಿ ಅಧಿಕಾರಿಗಳ ಮುಂದೆ ಹಾಜರುಪಡಿಸಿ ಭೂ ಪರಿವರ್ತನೆ ಮಾಡಿಕೊಂಡಿದ್ದರು.
ಆ ಬಳಿಕ ಜಂಟಿ ಅಭಿವೃದ್ದಿ ಪತ್ರದ ಕರಾರು ನಿಯಮಗಳನ್ನು ಉಲ್ಲಂಘಿಸಿ ಮಣಿಪಾಲದಲ್ಲಿರುವ ಸರ್ವೆ ನಂ. 345 ರಲ್ಲಿ 2.11 ಎಕರೆ ಭೂಮಿಯಲ್ಲಿ 0.46 ಎಕರೆ ಜಮೀನನ್ನು ದೇಣಿಗೆ ಪತ್ರದ ಮೂಲಕ ಉಡುಪಿ ನಗರಸಭೆಗೆ ನೀಡಿದ್ದರು.ಆದ್ದರಿಂದ, ಆ ಜಾಗದಲ್ಲಿ ಸುರೇಶ್ ಭಂಡಾರಿ ಅವರ ಸಂಸ್ಥೆಗೆ ಕಟ್ಟಡ ನಿರ್ಮಾಣ ಮಾಡಲು ಅನಾನುಕೂಲವಾಗಿದ್ದು, ಅವರ ಸಂಸ್ಥೆಗೆ ಸುಮಾರು 14.15 ಕೋಟಿ ರೂ. ನಷ್ಟ ಉಂಟಾಗಿದೆ.
ಇದೀಗ ಆರೋಪಿಗಳು ಸುರೇಶ್ ಭಂಡಾರಿ ಅವರ ಸಂಸ್ಥೆಯೊಂದಿಗೆ ಮಾಡಿದ ಕರಾರು ಪತ್ರದ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ನ್ಯಾಯಾಲಯದಲ್ಲಿ ಸಲ್ಲಿಸಿರುವ ಖಾಸಗಿ ದೂರಿನಂತೆ ಪ್ರಕರಣ ದಾಖಲಾಗಿದೆ.
Why it is written as FRUD in capital letters ? It supposed to be FRAUD I guess.