ದೆಹಲಿ ಸಿಎಂಗೂ ಕೊರೋನಾ ಲಕ್ಷಣ: ಎಲ್ಲಾ ಕಾರ್ಯಕ್ರಮ ರದ್ದು!

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಲ್ಲಿ ಮಹಾಮಾರಿ ಕೊರೋನಾ ವೈರಸ್ ಲಕ್ಷಣಗಳು ಕಂಡು ಬಂದಿದೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿರುವ ಕೇಜ್ರಿವಾಲ್ ಅವರು ಸೆಲ್ಫ್ ಐಸೋಲೇಷನ್ ನಲ್ಲಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. 

ಭಾನುವಾರ ಮಧ್ಯಾಹ್ನದ ವೇಳೆ ಕೇಜ್ರಿವಾಲ್ ಅವರಲ್ಲಿ ಜ್ವರ, ಗಂಟಲು ಕೆರೆತದಂತಹ ಕೊರೋನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಪಡಿಸಿ, ಐಸೋಲೇಷನ್ ನಲ್ಲಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ವೈರಸ್ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ನಾಳೆ ಕೇಜ್ರಿವಾಲ್ ಅವರಿಗೆ ಕೊರೋನಾ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ

Leave a Reply

Your email address will not be published. Required fields are marked *

error: Content is protected !!