ಪತ್ರಿಕೆ, ಟಿವಿಗಳಲ್ಲಿ ಬಂದರೆ ಮಾತ್ರ ಸಿದ್ದರಾಮಯ್ಯರಿಗೆ ಕಾಂಗ್ರೆಸ್ಸಿನಲ್ಲಿ ಅಸ್ತಿತ್ವವಿರುತ್ತದೆ: ನಳಿನ್ ಕುಮಾರ್

ದಾವಣಗೆರೆ: ಸಿದ್ದರಾಮಯ್ಯ ಅವರ ಬಗ್ಗೆ,  ಪತ್ರಿಕೆ, ಟಿವಿಗಳಲ್ಲಿ ಬಂದರೆ ಮಾತ್ರ ಅವರಿಗೆ ಕಾಂಗ್ರೆಸ್ಸಿನಲ್ಲಿ ಅಸ್ತಿತ್ವವಿರುತ್ತದೆ ಹಾಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಏನಾದರೂ ಮಾತನಾಡುತ್ತಾ ಇರುತ್ತಾರೆ‌ ಎಂದು  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ, ದಾವಣಗೆರೆಯಲ್ಲಿ  ಮತನಾಡಿದ ಅವರು,  ಸಿದ್ದರಾಮಯ್ಯ ಕಾಂಪಿಟೇಷನ್ ಗೆ ಬಿದ್ದಿದ್ದಾರೆ. ಅವರು ಮಾತನಾಡಲಿಲ್ಲ ಎಂದರೆ ಕಾಂಗ್ರೆಸ್ಸಿನಲ್ಲಿ ಕಳೆದು ಹೋಗುತ್ತಾರೆ.  ಕಾಂಗ್ರೆಸ್ ಎಂದರೆ ಬರೀ ಡಿಕೆಶಿ ಕಾಣುತ್ತಾರೆ, ಸಿದ್ದರಾಮಯ್ಯ ಕಾಣುವುದಿಲ್ಲ. ಹೀಗಾಗಿ ಡಿಕೆಶಿ ಅವರ ಮೇಲಿರುವ ಕೋಪದಿಂದ ಈ ರೀತಿ ಎಲ್ಲಾ ಮಾತನಾಡುತ್ತಾರೆ. ಪ್ರತಿನಿತ್ಯ ಟಿವಿಯಲ್ಲಿ ಕಾಣಿಸಿಕೊಳ್ಳಲು ಹೀಗೆ ಮಾತನಾಡುತ್ತಾರೆ‌ ಎಂದಿದ್ದಾರೆ.

ನಾನೇ ಮುಂದಿನ ಸಿಎಂ ಎಂದು ಸಿದ್ದರಾಮಯ್ಯ ಘೋಷಣೆ ಮಾಡಿಕೊಂಡಿದ್ದಾರೆ ಎಂದ ಅವರು, ಬಾದಾಮಿಯಲ್ಲಿ 18 ಗ್ರಾಮ ಪಂಚಾಯತಿ ಗೆದ್ದಿದೆ, ಕಾಂಗ್ರೆಸ್ 8 ಗ್ರಾಮ ಪಂಚಾಯತಿ ಗೆದ್ದಿದೆ. ಇದರಿಂದ   ಸಿದ್ದರಾಮಯ್ಯ ಬಾದಾಮಿಗೆ ಹೋಗಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ಸೇರಿದಂತೆ ಉಳಿದವುಗಳನ್ನು ರಾಜಕಾರಣಕ್ಕಾಗಿ ವಿರೋಧ ಮಾಡುತ್ತಿದ್ದಾರೆ. ಆಸ್ತಿತ್ವಕ್ಕಾಗಿ ಮಾತ್ರ ವಿರೋಧ ಮಾಡುತ್ತಿದ್ದಾರೆಯೇ ಹೊರತು     ಯಾವುದನ್ನೂ ಬೇಕು ಅಂತ ವಿರೋಧ ಮಾಡೋದಿಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!