2015ರ ಮೋದಿ ಲಾಹೋರ್‌ ಭೇಟಿ ಅನಗತ್ಯವಾಗಿತ್ತು – ಆತ್ಮಚರಿತ್ರೆಯಲ್ಲಿ ಪ್ರಣವ್‌ ಮುಖರ್ಜಿ ಉಲ್ಲೇಖ

ನವದೆಹಲಿ: 2015ರ ಕ್ರಿಸ್‌ಮಸ್‌ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಲಾಹೋರ್‌ಗೆ ದಿಢೀರ್‌ ಭೇಟಿ ನೀಡಿ, ಪಾಕಿಸ್ತಾನದ ಆಗಿನ ಪ್ರಧಾನಿ ನವಾಜ್‌ ಶರೀಫ್‌ ಅವರಿಗೆ ಜನ್ಮದಿನದ ಶುಭಾಶಯ ಹೇಳುವ ಅಗತ್ಯ ಇರಲಿಲ್ಲ ಎಂಬುದು ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಅಭಿಪ್ರಾಯವಾಗಿತ್ತು.

ಮಂಗಳವಾರ ಬಿಡುಗಡೆಯಾದ ಅವರ ಅತ್ಮಚರಿತ್ರೆ ‘ದಿ ಪ್ರೆಸಿಡೆನ್ಷಿಯಲ್ ಇಯರ್ಸ್‌: 2012–2017’ನ ನಾಲ್ಕನೇ ಸಂಪುಟದಲ್ಲಿ ಅವರು ಈ ವಿಷಯ ಕುರಿತು ಬರೆದಿದ್ದಾರೆ.

ಮುಖರ್ಜಿ ಅವರು ಕಳೆದ ವರ್ಷ ಆಗಸ್ಟ್‌ 31ರಂದು ಸಾವನ್ನಪ್ಪಿದರು. ಅದಕ್ಕೂ ಮುನ್ನವೇ ಅವರು ತಮ್ಮ ಆತ್ಮಚರಿತ್ರೆಯ ನಾಲ್ಕನೇ ಸಂಪುಟದ ಕರಡನ್ನು ಅಂತಿಮಗೊಳಿಸಿದ್ದರು. ನೋಟು ರದ್ದತಿ ಮಾಡಿ ನಾಲ್ಕು ವರ್ಷಗಳು ಗತಿಸಿದ್ದರೂ, ಅದರ ಉದ್ದೇಶಗಳು ಇನ್ನೂ ಈಡೇರಿಲ್ಲ ಎಂದು ಅವರು ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!