ರಾಜ್ಯ ಯುವ ಕಾಂಗ್ರೆಸ್ ನ ಪ್ರ. ಕಾರ್ಯದರ್ಶಿ ಸ್ಥಾನಕ್ಕೆ ವಡ್ಡರ್ಸೆ ಅಜಿತ್ ಸ್ಪರ್ಧೆ

ಉಡುಪಿ: ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಒಬ್ಬರು ಸಾಮಾನ್ಯ ಸ್ಥಾನದಿಂದ ಸ್ಪರ್ಧಿಸುತ್ತಿದ್ದಾರೆ.

ಈ ಚುನಾವಣೆಯು ಆನ್ಲೈನ್ ಮೂಲಕ ನಡೆಯಲಿದ್ದು, ಚುನಾವಣೆಗೆ ಸಾಮಾನ್ಯ ಸ್ಥಾನದಿಂದ ವಡ್ಡರ್ಸೆಯ ಅಜಿತ್ ಕುಮಾರ್ ಶೆಟ್ಟಿ ಅವರು ಸ್ಪರ್ಧಿಸುತ್ತಿದ್ದಾರೆ. ಇವರು ಚುನಾವಣೆಯಲ್ಲಿ ಏಣಿಯ ಗುರುತಿನ ಚಿಹ್ನೆಯ ಮೂಲಕ ಸ್ಪರ್ಧಿಸುತ್ತಿದ್ದಾರೆ. 

ಕಾಂಗ್ರೆಸ್ ನ ಓರ್ವ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಇವರು, ಡಿಕೆ ಶಿವುಕುಮಾರ್ ಅವರ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡಿದ್ದರು. ಈ ಚುನಾವಣೆ ಜನವರಿ 10, 11, 12 ರಂದು 3 ದಿನಗಳ ಕಾಲ ಬೆಳಿಗ್ಗೆ  9 ಗಂಟೆಯಿಂದ 4 ಗಂಟೆವರೆಗೆ ಆನ್ಲೈನ್ ನಲ್ಲಿ ನಡೆಯಲಿದೆ.

ರಾಜ್ಯಾದ್ಯಂತ ಸುಮಾರು 5,95,000 ಯುವ ಮತದಾರರು ಈ ಆನ್ಲೈನ್ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!