ಸುರತ್ಕಲ್: ಟೋಲ್ ಹಣ ಕೇಳಿದ್ದಕ್ಕಾಗಿ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿತ
ಮಂಗಳೂರು: ಟೋಲ್ ಹಣ ಕೇಳಿದ್ದಕ್ಕಾಗಿ ಟೋಲ್ ಸಿಬ್ಬಂದಿಯೊಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಇಂದು ಮಂಗಳೂರಿನ ಹೊರ ವಲಯದ ಸುರತ್ಕಲ್‌ನ ಟೋಲ್ ಗೇಟ್ ನಲ್ಲಿ ನಡೆದಿದೆ.
ಭಟ್ಕಳ ಮೂಲದ ನೋಂದಣಿಯ ಕಾರಿನಲ್ಲಿದ್ದ ಏಳು ಮಂದಿಯಿಂದ ಕೃತ್ಯ ನಡೆದಿದೆ ಎಂದು ತಿಳಿದು ಬಂದಿದೆ, ಹಲ್ಲೆಗೊಳಗಾದ ಟೋಲ್ ಸಿಬ್ಬಂದಿಯ ಕೈ ಮುರಿತಕ್ಕೊಳಗಾಗಿದ್ದು, ಹಲ್ಲೆ ಮಾಡಿದ ಬಳಿಕ ಕಾರು ಪ್ರಯಾಣಿಕರು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಬಗ್ಗೆ ಟೋಲ್ ಸಿಬ್ಬಂದಿಗಳು ಪೊಲೀಸರಿಗೆ ದೂರು ನೀಡಿದ್ದು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ