ಪ.ಜಾತಿ/ಪಂಗಡದವರಿಗೆ ಚಲನಚಿತ್ರ ಅಕಾಡಮಿ ತರಬೇತಿಗೆ ಅರ್ಜಿ ಆಹ್ವಾನ
ಮಣಿಪಾಲ(ಉಡುಪಿ ಟೈಮ್ಸ್ ವರದಿ): ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯುವಕ ಯುವತಿಯರಿಗೆ ಕರ್ನಾಟಕ ಚಲನ ಚಿತ್ರ ಅಕಾಡೆಮಿ ವತಿಯಿಂದ ಚಲನಚಿತ್ರ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ತರಬೇತಿಯಲ್ಲಿ 30 ವರ್ಷ ದೊಳಗಿನ ಯುವಕ ಯುವತಿಯರಿಗೆ ಚಲನಚಿತ್ರ ನಿರ್ದೇಶನ, ಛಾಯಾಗ್ರಹಣ, ವಿಡಿಯೋ ಸಂಕಲನ, ಸ್ಕ್ರಿಪ್ಟ್ ತಯಾರಿಕೆ, ಅಭಿನಯ ಇತ್ಯಾದಿಗಳ ಕುರಿತು ವಸತಿ ಸಹಿತ ತರಬೇತಿ ನೀಡಲಾಗುತ್ತದೆ.
ಚಲನಚಿತ್ರ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿರುವ 30 ವರ್ಷ ವಯೋಮಿತಿಯೊಳಗಿನ ಯಾವುದೇ ಪದವೀಧರ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಯುವಕ/ಯುವತಿಯರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಆಸಕ್ತರು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಯನ್ನು www.kcainfo.in ವೆಬ್ ಸೈಟ್ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಕಚೇರಿಯಿಂದ ಖುದ್ದು ಪಡೆಯಬಹುದಾಗಿದೆ.
ಪದವಿಯಲ್ಲಿ ಪಡೆದಿರುವ ಸರಾಸರಿ ಅಂಕದ ಜೇಷ್ಠತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ತರಬೇತಿ ಗೆ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಆಯ್ಕೆ ಮಾಡಿದ ಅರ್ಜಿಗಳನ್ನು
ಜ. 20 ರ ಸಂಜೆ 5 ಗಂಟೆಯೊಳಗೆ ಅರ್ಜಿಯಲ್ಲಿ ತಿಳಿಸಿರುವ ದಾಖಲಾತಿಯೊಂದಿಗೆ ಬೆಂಗಳೂರಿನಲ್ಲಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟರ್ ಗೆ ಸಲ್ಲಿಸಬಹುದಾಗಿದೆ.
ಕೊನೆಯ ದಿನಾಂಕದ ನಂತರ ಬಂದ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ಅವಧಿಯಲ್ಲಿ 080- 23493410, 9449322102 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.