ವಡಭಾಂಡೇಶ್ವರ-ತೊಟ್ಟಂ ಮುಖ್ಯ ರಸ್ತೆಯಲ್ಲಿ ದಿನನಿತ್ಯ ಅಪಘಾತ – ಪೌರಾಯುಕ್ತರಿಗೆ ಮನವಿ

ಉಡುಪಿ:(ಉಡುಪಿ ಟೈಮ್ಸ್ ವರದಿ) ವಡಭಾಂಡೇಶ್ವರ-ತೊಟ್ಟಂ ಮುಖ್ಯ ರಸ್ತೆಯಲ್ಲಿ ತಿರುವಿನಲ್ಲಿ ದಿನೇ ದಿನೇ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಭಾಗದಲ್ಲಿ ವೇಗವಾಗಿ ಬರುವ ವಾಹನಗಳಿಗೆ ಬ್ರೇಕ್ ಹಾಕುವ ಸಲುವಾಗಿ ಈ ಪರಿಸರದ ರಸ್ತೆಯಲ್ಲಿ ಹಂಪ್ಸ್ ಅಳವಡಿಸುವಂತೆ ಸಾರ್ವಜನಿಕರು ಉಡುಪಿ ನಗರ ಸಭಾ ಪೌರಾಯುಕ್ತರಿಗೆ ಮನವಿ ಮಾಡಿದ್ದಾರೆ. 

ಈ ಭಾಗದಲ್ಲಿ ಈವರೆಗೆ ಸುಮಾರು 50-60 ಅಪಘಾತ ಸಂಭವಿಸಿದ್ದು, 3-4 ಮಂದಿ ಮೃತಪಟ್ಟಿರುತ್ತಾರೆ. ಹಲವಾರು ವರ್ಷಗಳಿಂದ ಈ ತಿರುವಿಗೆ ಹಂಪ್ ಅಳವಡಿಸಬೇಕೆಂಬ ಬೇಡಿಕೆಯಿದ್ದರೂ, ಈ ತನಕ ಅದು ಕಾರ್ಯಗತವಾಗಿಲ್ಲ. 

ಇದೀಗ ಇಂದು ಮುಂಜಾನೆ ಈ ಭಾಗದಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು ಸವಾರರೋರ್ವರು ಮೃತಪಟ್ಟಿದ್ದಾರೆ. ಆದ್ದರಿಂದ ಇನ್ನು ಮುಂದಿನ ದಿನಗಳಲ್ಲಿ ಯಾವುದೇ ಅಪಘಾತವಾಗದಂತೆ ಈ ತಿರುವಿಗೆ ರಸ್ತೆ ಹಂಪ್ ಅತೀ ಶೀಘ್ರವಾಗಿ  ಅಳವಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಮಂಜು ಸಾಲಿಯನ ವಡಬಾಂಡೇಶ್ವರ,  ಮಂಜು ಕೊಳ, ಪುರಂದರ್ ತೊಟ್ಟಂ, ನಿತಿನ್ ಕಡೆಕಾರ್, ಜುನೇದ್, ತನ್ಸಿಫ್ ವಡಬಾಂಡೇಶ್ವರ, ನಯಾಜ್ ಬೈಲಕೆರೆ,  ಸಂತೋಷ್ ವಡಭಾಂಡೇಶ್ವರ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!