ಶಿರ್ವ: ಜೂ.8 ರೋಜರಿ ಕ್ರೆಡಿಟ್ ಕೋ.ಆ. ಸೊಸೈಟಿಯ 8ನೇ ಶಾಖೆ ಉದ್ಘಾಟನೆ
ಕುಂದಾಪುರ: ಕುಂದಾಪುರದಲ್ಲಿ ಜನ್ಮ ತಾಳಿದ ಸಹಕಾರ ಸಂಸ್ಥೆ ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯು ಅಭಿವ್ರದ್ದಿ ಪಥದಲ್ಲಿ ದಾಪುಗಾಲು ಹಾಕುತ್ತ ಕುಂದಾಪುರ ತಾಲೂಕಿನಲ್ಲದೆ ಉಡುಪಿ ಜಿಲ್ಲೆಯಾದ್ಯಂತ ತನ್ನ ಶಾಖೆಯನ್ನು ವಿಸ್ತರಿಸುತ್ತಿದೆ. ಇದೀಗ ರೋಜರಿ ಕ್ರೆಡಿಟ್ ಸಂಸ್ಥೆಯು ತನ್ನ 8ನೇ ಶಾಖೆಯನ್ನು ಶಿರ್ವಾದಲ್ಲಿ ಲೋಕಾರ್ಪಣೆಗೊಳಿಸಲು ಸಿದ್ಧಗೊಂಡಿದೆ.
ನೂತನ ಶಾಖೆಯು ಶಿರ್ವಾದ ಮುಖ್ಯ ರಸ್ತೆಯಲ್ಲಿನ ಬಹ್ರೇನ್ ಟವರಿನ ನೆಲ ಅಂತಸ್ತಿನಲ್ಲಿ ನಾಳೆ (ಜೂನ್ 8 ರಂದು) ಸೋಮವಾರ ಬೆಳಿಗ್ಗೆ 10.30ಕ್ಕೆ ಶಿರ್ವಾ ಚರ್ಚಿನ ಪ್ರಧಾನ ಧರ್ಮಗುರು ಅ. ವಂ.ಡೆನಿಸ್ ಡೆಸಾ, ಸ್ಥಳೀಯ ಗಣ್ಯರ ಉಪಸ್ಥಿತಿಯಲ್ಲಿ ಸರಳ ಸಮಾರಂಭವನ್ನು ಉದ್ಘಾಟಿಸಿ, ಆಶಿರ್ವಚನ ನೀಡಲಿದ್ದಾರೆ. ರೋಜರಿ ಕ್ರೆಡಿಟ್ ಸಂಸ್ಥೆಯ ಮುಖ್ಯ ಕಚೇರಿಯು ಕುಂದಾಪುರ ಕುಂದೇಶ್ವರ ದೇವಸ್ಥಾನದ ಬಳಿಯಿದ್ದು, ಕುಂದಾಪುರ, ಬೈಂದೂರು, ಪಡುಕೋಣೆ, ಬಸ್ರೂರು, ಪಿಯುಸ್ ನಗರ್, ಗಂಗೊಳ್ಳಿ, ಕಲ್ಯಾಣಪುರ ಸಂತೆಕಟ್ಟೆಯಲ್ಲಿ ತನ್ನ ಶಾಖೆಗಳುನ್ನು ಆರಂಭಿಸಿದ್ದು, ಗ್ರಾಹಕರ ವಿಶ್ವಾಸಕ್ಕೆ ತಕ್ಕಂತೆ ಸೇವೆಯನ್ನು ನೀಡುತ್ತಿದೆ. ಈಗ 8ನೇ ಶಾಖೆಯನ್ನು ಶಿರ್ವಾದಲ್ಲಿ ಸಿದ್ಧಗೊಂಡಿದೆ.
ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆಗಾಗಿ ಕುಂದಾಪುರ ರೋಜರಿ ಕ್ರೆಡಿಟ್ ಕೋ–ಅಪರೇಟಿವ್ ಸೊಸೈಟಿಗೆ 2019 ರ ರಾಜ್ಯ ಮಟ್ಟದ ‘ಉತ್ತಮ ಸಹಕಾರ ಸಂಘ ಪ್ರಶಸ್ತಿ’ ದೊರಕಿದೆ. ಕೋರೊನ ಮಹಾಮಾರಿಯಿಂದ ದೇಶದಲ್ಲಿ ಲಾಕ್ ಡೌನ್ ಇರುವುದರಿಂದ, ರೋಸರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿಯ ನಿರ್ದೇಶಕರು ಉದ್ಘಾಟನ ಕಾರ್ಯಕ್ರಮವನ್ನು ಸರಳವಾಗಿ ನಡೆಸಲು ನಿರ್ಧರಿಸಿದ್ದಾರೆ.
ಸಭಾ ಕಾರ್ಯಕ್ರಮ ನಡೆಸಲು ಸಾಧ್ಯವಾಗದಿದ್ದಕ್ಕೆ ವಿಷಾದವಿದೆ. ಲಾಕ್ ಡೌನ್ ಇದ್ದರೂ, ಗ್ರಾಹಕರ ಪ್ರೋತ್ಸಾಹದಿಂದ ಹೊಸ ಶಾಖೆ ಆರಂಭಿಸಿ ರೋಜರಿ ಸಂಸ್ಥೆ ಅಭಿವ್ರದ್ದಿ ಪಥದಲ್ಲಿ ಸಾಗಿಸುವುದು ನಮ್ಮ ಉದ್ದೇಶವಾಗಿದೆ. ನಮ್ಮ ಸಂಸ್ಥೆಯ ಸೇವೆಗೆ ಕಡಿಮೆ ಅವಧಿಯಲ್ಲಿ ಉತ್ತಮ ಹೆಸರು ದೊರಕ್ಕಿದ್ದು, ಇದರ ಲಾಭವನ್ನು ಶಿರ್ವಾ ಆಸುಪಾಸಿನ ಸಾರ್ವಜನಿಕರು ಪಡೆದು ಸಂಸ್ಥೆಗೆ ಸಹಕಾರ ಪ್ರೋತ್ಸಾಹ ನೀಡಿ, ರೋಸರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇನ್ನೂ ಹೆಚ್ಚಿನ ಯಶಸ್ಸು ಪಡೆಯಲು ಕಾರಣರಾಗಬೇಕೆಂದು ಸಂಸ್ಥೆಯ ಅಧ್ಯಕ್ಷ ಜಾನ್ಸನ್ ಡಿ’ಆಲ್ಮೇಡಾ ವಿನಂತಿಸಿದ್ದಾರೆ.
Johnson, thank you for the invitation. I wish a safe and prosperous banking business at your new Shirva Branch. Let your institution attain further heights under your dynamic leadership. My regards to all your Directors and staff on this happy occasion. Excuse my absence at the function due to compelling obvious reasons.