ಕಾರ್ಕಳ: ತರಕಾರಿ ಸಾಗಿಸುತ್ತಿದ್ದ ಲಾರಿ ಪಲ್ಟಿ – ಚಾಲಕ ಮೃತ್ಯು
ಕಾರ್ಕಳ: ಮಾಳ ಘಾಟಿಯಲ್ಲಿ ತರಕಾರಿ ಸಾಗಿಸುತ್ತಿದ್ದ ಲಾರಿಯೊಂದು ಕಮರಿಗೆ ಬಿದ್ದು, ಲಾರಿ ಚಾಲಕ ಮೃತಪಟ್ಟ ಘಟನೆ ಶನಿವಾರ ಮುಂಜಾನೆ ನಡೆದಿದೆ.
ಮೃತ ಲಾರಿ ಚಾಲಕ ಚಿಕ್ಕಮಗಳೂರಿನ ಆಲ್ದೂರಿನ ಅಣ್ಣಪ್ಪ(56) ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರಿನಿಂದ ಬಜಗೋಳಿ ಕಡೆ ತರಕಾರಿ ಸಾಗಿಸುತಿತ್ತು. ಲಾರಿಯಲ್ಲಿದ್ದ ರವಿ ಎಂಬುವವರು ಗಾಯಗೊಂಡಿದ್ದು, ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರ್ಕಳ ಗ್ರಾಮಾಂತರ ಪೋಲೀಸ್ ಠಾಣೆಯ ಅಧಿಕಾರಿಗಳು ಕೂಡಲೇ ಧಾವಿಸಿದ್ದು, ಕಾಡಿನ ಮಧ್ಯೆ ಕಮರಿಗೆ ಬಿದ್ದ ಲಾರಿಯಿಂದ ಚಾಲಕನ ಮೃತದೇಹ ತೆಗೆಯಲು ತುಂಬಾ ಹರಸಾಹಸ ಪಡಬೇಕಾಯಿತು.