ಉಡುಪಿ: ಖುಷಿಯಿಂದ ಶಾಲೆಯ ಕಡೆಗೆ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು
ಉಡುಪಿ: ರಾಜ್ಯಾದ್ಯಂತ ಇಂದು ಎಲ್ಲೆಡೆ ಶಾಲೆಗಳು ಮತ್ತೆ ತೆರೆದುಕೊಂಡಿದೆ ಅದರಂತೆ ಉಡುಪಿ ಜಿಲ್ಲೆಯಲ್ಲಿಯೂ ಶಾಲೆಗಳು ತೆರೆದುಕೊಂಡಿದೆ. ಹಲವಾರು ಸಮಯದ ಬಳಿಕ ವಿದ್ಯಾರ್ಥಿಗಳು ಖುಷಿಯಿಂದ ಶಾಲೆಯ ಕಡೆಗೆ ಹೆಜ್ಜೆ ಹಾಕಿದ್ದಾರೆ. ಇಂದು ಜಿಲ್ಲೆಯಲ್ಲಿ ಒಟ್ಟು 820 ಶಾಲೆಗಳು ತೆರೆದು ಕೊಂಡಿದ್ದು ಈ ಪೈಕಿ 437 ಸರಕಾರಿ ಶಾಲೆಗಳು, 205 ಅನುದಾನಿತ ಶಾಲೆಗಳು ಹಾಗೂ 142 ಅನುದಾನ ರಹಿತ ಶಾಲೆಗಳು ಇಂದು ಮತ್ತೆ ತೆರೆದುಕೊಂಡಿದೆ. ಬೈಂದೂರಿನ ಲ್ಲಿ ಒಟ್ಟು 162 ಶಾಲೆಗಳು ತೆರೆದು ಕೊಂಡಿದ್ದು, ಈ ಪೈಕಿ 110 ಸರಕಾರಿ ಶಾಲೆಗಳು,14 ಅನುದಾನಿತ ಹಾಗೂ 38 ಅನುದಾನ ರಹಿತ ಶಾಲೆಗಳು ಇಂದು ಆರಂಭ ಗೊಂಡವು. ಬ್ರಹ್ಮಾವರದಲ್ಲಿ 145 ಶಾಲೆಗಳು ಆರಂಭ ಗೊಂಡಿದ್ದು ಈ ಪೈಕಿ 83 ಸರಕಾರಿ, 56 ಅನುದಾನಿತ ಹಾಗೂ 6 ಅನುದಾನ ರಹಿತ ಶಾಲೆಗಳು ಇಂದು ಆರಂಭ ಗೊಂಡವು. ಕಾರ್ಕಳ ದಲ್ಲಿ ಒಟ್ಟು 177 ಶಾಲೆಗಳು ಇಂದು ತೆರೆದುಕೊಂಡಿದ್ದು ಈ ಪೈಕಿ 113 ಸರಕಾರಿ, 38 ಅನುದಾನಿತ ಹಾಗೂ 26 ಅನುದಾನ ರಹಿತ ಶಾಲೆಗಳು ಇಂದು ಆರಂಭ ಗೊಂಡಿದೆ. ಇನ್ನು ಕುಂದಾಪುರ ದಲ್ಲಿ 99 ಸರಕಾರಿ, 25 ಅನುದಾನಿತ ಹಾಗೂ 34 ಅನುದಾನ ರಹಿತ ಶಾಲೆಗಳು ಸೇರಿ ಒಟ್ಟು 158 ಶಾಲೆಗಳು ಇಂದು ಅರಂಭ ಗೊಂಡವು. ಉಡುಪಿ ಯಲ್ಲಿ 68 ಸರಕಾರಿ, 72 ಅನುದಾನಿತ ಹಾಗೂ 38 ಅನುದಾನ ರಹಿತ ಶಾಲೆಗಳು ಸೇರಿ ಒಟ್ಟು 178 ಶಾಲೆಗಳು ಆರಂಭಗೊಂಡವು. ಜಿಲ್ಲೆಯ ಸರಕಾರಿ , ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಒಟ್ಟು 66,514 ವಿದ್ಯಾರ್ಥಿಗಳು ದಾಖಲಾಗಿದ್ದು ಇಂದು 32,878 ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದರು. ಈ ಮೂಲಕ ಸರಕಾರಿ ಶಾಲೆಯಲ್ಲಿ 59.53 ಶೇಕಡಾ, ಅನುದಾನಿತ ಶಾಲೆಗಳಲ್ಲಿ 55 ಶೇಕಡಾ ಹಾಗೂ ಅನುದಾನಿತ ಶಾಲೆಗಳಲ್ಲಿ 36.93 ಶೇಕಡಾ ವಿದ್ಯಾರ್ಥಿಗಳು ಗಳು ಇಂದು ಶಾಲೆಗೆ ಹಾಜರಾಗಿದ್ದಾರೆ. ಇನ್ನು ಕುಂದಾಪುರ ತಾಲೂಕಿನ ಲ್ಲಿ ಅತೀ ಹೆಚ್ಚು ಅಂದರೆ 11,844 ವಿದ್ಯಾರ್ಥಿಗಳು ಶಾಲೆಗೆ ಹಾಜರಾದರೆ, ಬೈಂದೂರಿನ ಲ್ಲಿ ಅತೀ ಕಡಿಮೆ ಅಂದರೆ 3,182 ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಹಾಜರಾಗಿದ್ದಾರೆ. ಉಳಿದಂತೆ ಬ್ರಹ್ಮಾವರದಲ್ಲಿ 8315 , ಉಡುಪಿಯಲ್ಲಿ 5143, ಹಾಗೂ ಕಾರ್ಕಳ ದಲ್ಲಿ 4395 ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದಾರೆ. ಈ ಮೂಲಕ ಬ್ರಹ್ಮಾವರದಲ್ಲಿ ಸರಕಾರಿ ಶಾಲೆಗಳಲ್ಲಿ 3583 ಅನುದಾನಿತ ಶಾಲೆಗಳಲ್ಲಿ 2983 ಹಾಗೂ ಅನುದಾನ ರಹಿತ ಶಾಲೆಗಳಲ್ಲಿ 1749 ವಿದ್ಯಾರ್ಥಿಗಳು ಇಂದು ಹಾಜರಾದರೆ , ಬೈಂದೂರಿನ ಲ್ಲಿ ಸರಕಾರಿ ಶಾಲೆಗಳಲ್ಲಿ 1615 , ಅನುದಾನಿತ ಶಾಲೆಗಳಲ್ಲಿ 345 ಹಾಗೂ ಅನುದಾನ ರಹಿತ ಶಾಲೆಗಳಲ್ಲಿ1222 ವಿದ್ಯಾರ್ಥಿಗಳು,ಕಾರ್ಕಳ ದ ಸರಕಾರಿ ಶಾಲೆಗಳಲ್ಲಿ 2190, ಅನುದಾನಿತ ಶಾಲೆಗಳಲ್ಲಿ 702 ಹಾಗೂ ಅನುದಾನ ರಹಿತ 1503 ವಿದ್ಯಾರ್ಥಿಗಳು, ಕುಂದಾಪುರ ದ ಸರಕಾರಿ ಶಾಲೆಗಳಲ್ಲಿ 6454, ಅನುದಾನಿತ ಶಾಲೆಗಳಲ್ಲಿ 1245 ಹಾಗೂ ಅನುದಾನ ರಹಿತ ಶಾಲೆಗಳಲ್ಲಿ 4145 ವಿದ್ಯಾರ್ಥಿಗಳು ಮತ್ತು ಉಡುಪಿಯ ಸರಕಾರಿ ಶಾಲೆಗಳಲ್ಲಿ 2052, ಅನುದಾನಿತ ಶಾಲೆಗಳಲ್ಲಿ 1669 ಹಾಗೂ ಅನುದಾನ ರಹಿತ ಶಾಲೆಗಳಲ್ಲಿ 1422 ವಿದ್ಯಾರ್ಥಿಗಳು ಇಂದು ಶಾಲೆಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ. |