ಮೀನಿನಲ್ಲಿ ಫಾರ್ಮಲಿನ್ ಕಂಡುಬoದಿಲ್ಲ- ಜಿಲ್ಲಾಧಿಕಾರಿ ಜಿ. ಜಗದೀಶ್ ಸ್ಪಷ್ಟನೆ

ಉಡುಪಿ : ಜಿಲ್ಲೆಯ ಮಲ್ಪೆ ಬಂದರಿನಲ್ಲಿ ಮೀನಿನಲ್ಲಿ ಫಾರ್ಮಲಿನ್ ಬಳಕೆ ಮಾಡುತ್ತಿರುವ ಕುರಿತು ದೂರು ಬಂದ ಹಿನ್ನಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು ಮೀನುಗಾರಿಕಾ ಅಧಿಕಾರಿಗಳು ಡಿಸೆಂಬರ್ 18 ರಂದು ಮಲ್ಪೆ ಬಂದರಿಗೆ ಭೇಟಿ ನೀಡಿ ವಿವಿಧ 12 ಜಾತಿಯ ಮೀನುಗಳ ಆಹಾರ ಮಾದರಿಯನ್ನು ತೆಗೆದು ಬೆಂಗಳೂರಿನ ಪ್ರಯೋಗಾ ಶಾಲಾ ವಿಶ್ಲೇಷಣೆಗೆ ಕಳುಹಿಸಿದ್ದು, ಇದರ ವರದಿಯಲ್ಲಿ ಮೀನಿನಲ್ಲಿ
ಫಾರ್ಮಲಿನ್ ಇರುವುದು ಕಂಡು ಬಂದಿರುವುದಿಲ್ಲ.

ಫಾರ್ಮಲಿನ್ ಟೆಸ್ಟ್ ಕಿಟ್‌ನ್ನು ತರಿಸಲಾಗಿದ್ದು, ಮೀನಿನಲ್ಲಿ ಫಾರ್ಮಲಿನ್ ಇರುವ ಬಗ್ಗೆ ಪರೀಕ್ಷೆ ನಡೆಸಲಾಗುವುದರಿಂದ ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲ. ಫಾರ್ಮಲಿನ್ ಕಂಡುಬ0ದರೆ ಮೀನಿನ ಆಹಾರ ಮಾದರಿಯನ್ನು ತೆಗೆದು ಪ್ರಯೋಗ ಶಾಲಾ ವಿಶ್ಲೇಷಣೆಗೆ ಕಳುಹಿಸಿ ಫಲಿತಾಂಶದ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!