ಉಡುಪಿ-13, ದ.ಕ.-17, ರಾಜ್ಯದಲ್ಲಿ 239 ಮಂದಿಗೆ ಪಾಸಿಟಿವ್

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಿದ್ದು, ಶನಿವಾರ ಸಹ ಬರೋಬ್ಬರಿ 239 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5452ಕ್ಕೆ ಏರಿಕೆಯಾಗಿದೆ.

ಉಡುಪಿ-13, ದಕ್ಷಿಣ ಕನ್ನಡ-17, ಕಲಬುರ್ಗಿ-39, ಯಾದಗಿರಿ-39, ಬೆಂಗಳೂರು ನಗರ-23, ರಾಯಚೂರು-01, ಮಂಡ್ಯ-01, ಬೆಳಗಾವಿ-38, ಬೀದರ್-07, ಹಾಸನ-05, ವಿಜಯಪುರ-09, ದಾವಣಗೆರೆ-17, ಉತ್ತರ ಕನ್ನಡ-02, ಧಾರವಾಡ-03, ಗದಗ-02

ರಾಜ್ಯದಲ್ಲಿ ಕೊರೋನಾದಿಂದ ಇದುವರೆಗೆ 61 ಮಂದಿ ಮೃತಪಟ್ಟಿದ್ದು, 2132 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ. ಇನ್ನು 3,257 ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದ ಸಹ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!