ರಾಜ್ಯದ 10 ಜಿಲ್ಲೆಯಲ್ಲಿ ವಿಜಯದ ನಗೆ ಬೀರಿದ ಎಸ್’ಡಿಪಿಐನ 221 ಅಭ್ಯರ್ಥಿಗಳು
ಮಂಗಳೂರು : ಈ ಭಾರಿಯ ಗ್ರಾಮ ಪಂಚಾಯತ್ ಚುನಾವಣೆ ಅನೇಕ ವಿಶೇಷತೆಗಳನ್ನು ಒಳಗೊಂಡಿದ್ದು, ಹಲವೆಡೆ ಅನಿರೀಕ್ಷಿತ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಎಸ್ ಡಿಪಿಐನಿಂದ ಸ್ಪರ್ಧಿಸಿದ್ದ 485 ಸ್ಥಾನಗಳಲ್ಲಿ 221 ಅಭ್ಯರ್ಥಿಗಳು ವಿಜಯ ಪತಾಕೆಯನ್ನು ಹಾರಿಸಿದ್ದಾರೆ.
2015ರ ಗ್ರಾಮ ಪಂಚಾಯತ್ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಚುನಾವಣೆಯಲ್ಲಿ ಎಸ್ ಡಿಪಿಐ ದಾಖಲೆಯ ಫಲಿತಾಂಶ ಪಡೆದುಕೊಂಡಿದ್ದು, ಒಟ್ಟು 3 ಗ್ರಾಮ ಪಂಚಾಯತ್ ಗಳಲ್ಲಿ ಸ್ಪಷ್ಟಬಹುಮತ ಪಡೆದರೆ. 10 ಗ್ರಾಮ ಪಂಚಾಯತ್ ಗಳಲ್ಲಿ ನಿರ್ಣಾಯಕ ಪಾತ್ರವನ್ನು ಎಸ್ ಡಿಪಿಐ ನಿರ್ವಹಿಸಲಿದೆ.
ರಾಜ್ಯಾದ್ಯಂತ ನಡೆದ ಗ್ರಾಮ ಪಂಚಾಯತ್ ಚುನಾವಣೆ ಯ ಫಲಿತಾಂಶ ದಲ್ಲಿ ಎಸ್ ಡಿಪಿಐನ ಅಭ್ಯರ್ಥಿಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ 171 ಅಭ್ಯರ್ಥಿಗಳು ವಿಜಯಿಗಳಾಗಿದ್ದು ಉಳಿದಂತೆ ಉಡುಪಿ 15, ಉತ್ತರ ಕನ್ನಡ 7, ಕೊಡಗು 12, ಹಾಸನ 4, ಬಳ್ಳಾರಿ 2, ಗುಲ್ಬರ್ಗ 7, ಕೊಪ್ಪಳ1, ಬೆಳಗಾವಿ 1, ಯಾದಗಿರಿ 1 ಅಭ್ಯರ್ಥಿಗಳು ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.
ಸೋತಿರುವವರಲ್ಲಿ ಸುಮಾರು 50ಕ್ಕೂ ಹೆಚ್ಚು ಅಭ್ಯರ್ಥಿಗಳು ಕೆಲವೇ ಮತಗಳ ಅಂತರದಿಂದ ಸೋತಿದ್ದಾರೆ ಎಂಬೂದು ವಿಶೇಷ. ಗೆದ್ದವರಲ್ಲಿ ಶೇ.20ರಷ್ಟು ಅಭ್ಯರ್ಥಿಗಳು ದಲಿತ ಮತ್ತು ಒಬಿಸಿ ಸಮುದಾಯಕ್ಕೆ ಸೇರಿದವರಾಗಿದ್ದು, ಶೇ.50ಕ್ಕೂ ಹೆಚ್ಚು ಮಂದಿ ಮಹಿಳಾ ಅಭ್ಯರ್ಥಿಗಳು ಗೆದ್ದಿದ್ದಾರೆ ಎಂಬುದು ಗಮನಾರ್ಹ ವಿಚಾರ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸ್ಥಾನಗಳನ್ನು ಎಸ್ ಡಿ ಪಿ ಐ ತನ್ನದಾಗಿಸಿ ಕೊಂಡಿದ್ದು, ರಾತ್ರಿ 11:30ರ ವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ, 167 ಎಸ್ ಡಿಪಿಐ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ಈ ಪೈಕಿ ಉಲ್ಲಾಳದಲ್ಲಿ ಗರಿಷ್ಠ 52 ಅಭ್ಯರ್ಥಿಗಳು ಗೆದ್ದಿದ್ದಾರೆ. ಈ ಪೈಕಿ ಉಲ್ಲಾಳದಲ್ಲಿ 52, ಮಂಗಳೂರು ಉತ್ತರ 28, ಮೂಡುಬಿದಿರೆ 13, ಬಂಟ್ವಾಳ 27. ಪುತ್ತೂರು 15, ಬೆಳ್ತಂಗಡಿ 22, ಸುಳ್ಯ 7 ಮತ್ತು ಕಡಬದಲ್ಲಿ 3 ಅಭ್ಯರ್ಥಿಗಳು ಗೆದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.