ಹೆಬ್ರಿ: 5 ಬಿಜೆಪಿ, 1 ಕಾಂಗ್ರೆಸ್, ಪಕ್ಷೇತರ ಹಾಗೂ ಸಮಬಲ ಒಂದು ಸ್ಥಾನ

ಹೆಬ್ರಿ: ತಾಲ್ಲೂಕಿನ 9 ಗ್ರಾಮ ಪಂಚಾಯಿತಿಗೆ ನಡೆದ ಚುನಾವಣ ಫಲಿತಾಂಶ ಪ್ರಕಟಗೊಂಡಿದ್ದು ತಾಲೂಕಿನಲ್ಲಿ 5 ಬಿಜೆಪಿ ಬೆಂಬಲಿತ ,1 ಕಾಂಗ್ರೆಸ್ ಬೆಂಬಲಿತ, 1 ಪಕ್ಷೇತರ, 1 ಸಮಬಲ ಸ್ಥಾನ ಪಡೆದುಕೊಂಡಿದೆ.

ಮುದ್ರಾಡಿ 15ರಲ್ಲಿ 15 ಬಿಜೆಪಿ ಬೆಂಬಲಿತ  ಅಭ್ಯರ್ಥಿ ಗಳು ಗೆಲುವು ಸಾಧಿಸಿದ್ದು ಮುದ್ರಾಡಿ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಗದ್ದುಗೆ ಏರಿದೆ.ಹೆಬ್ರಿಯಲ್ಲಿ ಸಮಬಲ. 

 ನಾಡ್ಪಾಲು ಗ್ರಾಮ ಪಂಚಾಯಿತಿಯಲ್ಲೂ ಕಳೆದ ಅವಧಿಯಲ್ಲಿ ಬಿಜೆಪಿ ಬೆಂಬಲಿತರ ಅಧಿಕಾರವಿದ್ದು ಈ ಬಾರಿಯೂ ಗದ್ದುಗೆ ಉಳಿಸಿಕೊಂಡಿದ್ದಾರೆ.  7 ರಲ್ಲಿ 7ಸ್ಥಾನವನ್ನು ಮತ್ತೇ ಬಿಜೆಪಿ ಉಳಿಸಿಕೊಂಡಿದೆ.

ಕುಚ್ಚೂರು ಗ್ರಾಮ ಪಂಚಾಯಿತಿಯಲ್ಲಿ ಈ ಸಲ ಪಕ್ಷೇತರರು ಅಧಿಕಾರದ ಗದ್ದುಗೆ  ಹಿಡಿದಿದ್ದಾರೆ. 11 ಸದಸ್ಯ ಬಲದ ಪಂಚಾಯಿತಿಯಲ್ಲಿ  5 ಮಂದಿ ಬಿಜೆಪಿ  ಬೆಂಬಲಿತರು ಹಾಗೂ 8 ಮಂದಿ  ಪಕ್ಷೇತರ ಅಭ್ಯರ್ಥಿ ಗಳು ಜಯಗಳಿಸಿ ಗದ್ದುಗೆ ಏರಿದ್ದಾರೆ.  

 ಮಡಾಮಕ್ಕಿ ಗ್ರಾಮ ಪಂಚಾಯಿತಿಯ 11 ಸೀಟಿನಲ್ಲಿ 6  ಕಡೆ ಕಾಂಗ್ರೆಸ್‌ ಜಯಗಲಿಸಿದೆ. 5ಕಡೆ ಬಿಜೆಪಿ ಜಯಗಳಿಸಿದೆ.  ಹೆಬ್ರಿ ಗ್ರಾಮ ಪಂಚಾಯತ್ ನಲಿ 16 ರಲಿ 8 ಪಕ್ಷೇತರ 8 ಬಿಜೆಪಿ ಬೆಂಬಲಿತರು ಜಯಗಳಿಸಿದ್ದು ಸಮಬಲವನ್ನು ಕಾಯ್ದುಕೊಂಡಿದ್ದಾರೆ.

ಬೆಳ್ವೆ ಗ್ರಾಮ ಪಂಚಾಯತ್  18 ರಲ್ಲಿ  13ಬಿಜೆಪಿ5 ಕಾಂಗ್ರೆಸ್ ಬೆಂಬಲಿತರು ಜಯಸಾಧಿಸಿದ್ದಾರೆ.

ವರಂಗ ಗ್ರಾಮ  ಪಂಚಾಯತ್  18ರಲಿ ಇಬ್ಬರು ಬಿಜೆಪಿ ಬೆಂಬಲಿತರು ಅವಿರೋಧವಾಗಿ ಆಯ್ಕೆ ಯಾಗಿದ್ದು ಸೇರಿದಂತೆ 14 ಬಿಜೆಪಿ 4 ಪಕ್ಷೇತರರು ಜಯಸಾಧಿಸಿದ್ದಾರೆ. ಪಡುಕುಡೂರು ವಾರ್ಡ್ ನಲ್ಲಿ ಬಿಜೆಪಿ ಬೆಂಬಲಿತ ಸಂತೋಷ್ ನಾಯ್ಕ 1ಮತದ ಅಂತರದಿಂದ ಪ್ರತಿಸ್ಪರ್ಧಿ  ಪಕ್ಷೇತರ ಅಭ್ಯರ್ಥಿ ಉದಯ ನಾಯ್ಕ  ಅವರ ಎದುರಿನಲ್ಲಿ  ವಿಜಯ ಸಾಧಿಸಿದ್ದಾರೆ 

 ಶಿವಪುರ ಗ್ರಾಮ ಪಂಚಾಯಿತಿಯಲ್ಲಿ  13ರಲ್ಲಿ 8ಮಂದಿ ಬಿಜೆಪಿಯ ಬೆಂಬಲಿತರು ಜಯಗಳಿಸಿ ಅಧಿಕಾರ ಉಳಿಸಿಕೊಂಡಿದ್ದಾರೆ. ಪಕ್ಷೇತರರು 5 ಸ್ಥಾನಕ್ಕೆ ತೃಪ್ತಿ ಪಡೆದಿದ್ದಾರೆ.ಚಾರ ಗ್ರಾಮ ಪಂಚಾಯತ್ ನ 13ಸ್ಥಾನಗಳಲಿ 7 ಬಿಜೆಪಿ 3 ಪಕ್ಷೇತರ , 3 ಸ್ವತಂತ್ರ  ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ .

Leave a Reply

Your email address will not be published. Required fields are marked *

error: Content is protected !!