ಕೃಷಿ ಉದ್ಯಮಕ್ಕೆ ಉತ್ತಮ ಭವಿಷ್ಯವಿದೆ: ಕುದಿ ಶ್ರೀನಿವಾಸ ಭಟ್
ಉಡುಪಿ: ಕೊರೋನ ಲಾಕ್‌ಡೌನ್ ಕಾಲಘಟ್ಟದಲ್ಲಿ ಎಲ್ಲವೂ ಸ್ತಬ್ಧವಾಗಿದ್ದಾಗ ಅನ್ನದಾತನೇ ಚಟುವಟಿಕೆಯಿಂದ ಇದ್ದು ದೇಶದ ಏಳಿಗೆಯಲ್ಲಿ ಪ್ರಧಾನ ಪಾತ್ರವಹಿಸಿರುವುದು. ಭವಿಷ್ಯದಲ್ಲಿ ಕೃಷಿ ಕ್ಷೇತ್ರದ ಉದ್ಯಮಕ್ಕೆ ಉತ್ತಮ ಭವಿಷ್ಯವಿದೆ. ಸೂಕ್ತ ಮಾಹಿತಿ-ಮಾರ್ಗದರ್ಶನ ಪಡೆದು ಮುಂದುವರೆದರೆ ಬೇರಾವುದೇ ಉದ್ಯಮಕ್ಕಿಂತ ಹೆಚ್ಚಿನ ಆದಾಯ ಕೃಷಿಯಿಂದ ಪಡೆಯಲು ಸಾಧ್ಯವಿದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಹೇಳಿದರು. ಜಿಲ್ಲಾ ಕೃ಼ಷಿಕ ಸಂಘ ಪೆರಂಪಳ್ಳಿ ವಲಯ ಸಮಿತಿ, ಪೆರಂಪಳ್ಳಿ ಫೆಡ್ರಿಕ್ ಡಿಸೋಜಾರ ಮನೆಯಂಗಳದಲ್ಲಿ ಆಯೋಜಿಸಿದ್ದ ರೈತ ದಿನಾಚರಣೆ ಮತ್ತು ಕೃಷಿಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿಕ ಸಂಘ ಪೆರಂಪಳ್ಳಿ ವಲಯ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಶ್ರೀಯಾನ್ ಸ್ವಾಗತಿಸಿದರು. ಜಂಟೀ ಕೃಷಿ ನಿರ್ದೇಶಕ ಕೆಂಪೇಗೌಡ ಕೃಷಿಕರಿಗೆ ಇಲಾಖೆಯಿಂದ ದೊರಕುವ ಸೇವಾ ಸೌಲಭ್ಯಗಳ ಮಾಹಿತಿ ನೀಡಿದರು. ನಗರ ಸಭಾ ಸದಸ್ಯರಾದ ಪ್ರಭಾಕರ ಪೂಜಾರಿ, ಸೆಲಿನ್ ಕರ್ಕಡ, ಹಿರಿಯ ಕೃಷಿಕ ಶಂಕರ ಕೋಟ್ಯಾನ್ ಪೆರಂಪಳ್ಳಿ ,ಕೃಷಿಕ ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ, ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು, ಸಭೆಯಲ್ಲಿ ಭಾಗವಹಿಸಿದ್ದರು.
ಪೆರಂಪಳ್ಳಿ ವಲಯದ ಹಿರಿಯ ಹಾಗೂ ಪ್ರಗತಿಪರ ಕೃಷಿಕರಾದ ಆಚಾರಿಬೆಟ್ಟು ಲೂವಿಸ್ ಡಿಸೋಜಾ, ಶೀಂಬ್ರ ಕಮಲ ಪೂಜಾರಿ ಹಾಗೂ ಯುವ ಕೃಷಿಕೆ ಸೆಲಿನ್ ಡಿಸಿಲ್ವಾ ಇವರುಗಳನ್ನು ಇದೇ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ರೋಸಿ ಪಿಂಟೋ, ಪ್ರೇಮ ಪೂಜಾರಿ, ಹೇಮ ವಿಜಯಾ, ಜಯಂತಿ ಶಂಕರ್, ಪ್ರಮೀಳಾ ಜಯಂತಿ, ರಫೈಲ್ ,ಆಲ್ವಿನ್ ಡಿಸೋಜಾ, ವಿನ್ಸೆಂಟ್,ಪೀಟರ್ ಡಿಸೋಜಾ, ರವೀಂದ್ರನಾಥ ಶೆಟ್ಟಿ, ಬಾಬಣ್ಣ ಪುತ್ತೂರು, ರಾಜೀವಿ, ಶಾಂತಿ ಡಿಸೋಜಾ ಹೆಲೆನ್ ಬ್ರಿಟ್ಟೋ, ಅಕ್ಕಮ್ಮ, ಪ್ರೆಸಿಲ್ಲ, ಬೇಬಿ ಮೊದಲಾದವರು ಉಪಸ್ಥಿತರಿದ್ದರು. ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಪೂಜಾರಿ ಶೀಂಬ್ರ, ಕಾರ್ಯಕ್ರಮ ನಿರ್ವಹಣೆ ಮಾಡಿ, ಧನ್ಯವಾದವಿತ್ತರು.