ವಾಹನಗಳ ಮುಂಭಾಗದ ಪ್ರಯಾಣಿಕ ಸೀಟ್ ಗಳಲ್ಲಿ ಏರ್ ಬ್ಯಾಗ್ ಕಡ್ಡಾಯಗೊಳಿಸಲು ಸರ್ಕಾರದ ಚಿಂತನೆ
ನವದೆಹಲಿ: ವಾಹನಗಳ ಮುಂಭಾಗದ ಸೀಟ್ ಗಳಲ್ಲಿ ಏರ್ ಬ್ಯಾಗ್ ನ್ನು ಕಡ್ಡಾಯಗೊಳಿಸುವುದಕ್ಕೆ ಪ್ರಸ್ತಾವನೆ ಇದೆ ಎಂದು ಸರ್ಕಾರ ಹೇಳಿದೆ. ಅಪಘಾತ ಉಂಟಾದಾಗ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ.
ರಸ್ತೆ ಸಾರಿಗೆ ಸಚಿವಾಲಯ ಈ ಸಂಬಂಧ ಅಧಿಸೂಚನೆಯ ಕರಡನ್ನು ತಯಾರಿಸಿದೆ ಎಂದು ಸಚಿವಾಲಯ ತಿಳಿಸಿದೆ.
ಹೊಸ ಕಾರು, ವಾಹನಗಳಲ್ಲಿ ಏ.1, 2021 ರಿಂದ ಪ್ರಸ್ತಾವಿತ ಕಾನೂನು ಜಾರಿಗೆ ತರುವುದಕ್ಕೆ ನಿರ್ಧರಿಸಲಾಗಿದ್ದು, ಈಗಿರುವ ಮಾದರಿಯ ವಾಹನಗಳಲ್ಲಿ ಜೂ.1, 2021 ರಿಂದ ಇದನ್ನು ಜಾರಿಗೆ ತರಬೇಕಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟವರಿಂದ ಸಲಹೆ, ಅಭಿಪ್ರಾಯಗಳನ್ನೂ ಸಚಿವಾಲಯ ಸಂಗ್ರಹಿಸಲು ಮುಂದಾಗಿದ್ದು, [email protected] ನಲ್ಲಿ 30 ದಿನಗಳ ಒಳಗಾಗಿ ಸಲ್ಲಿಸಬಹುದಾಗಿದೆ.