ರಾಜ್ಯದಲ್ಲಿ ಜ.1ರಿಂದ ಶಾಲಾ, ಕಾಲೇಜ್ ಬಹುತೇಕ ಆರಂಭ

ಬೆಂಗಳೂರು: ಜ.1ರಿಂದ ರಾಜ್ಯದಲ್ಲಿ ಶಾಲೆ ಕಾಲೇಜುಗಳಲ್ಲಿ ತರಗತಿಗಳನ್ನು ಬಹುತೇಕ ಆರಂಬಿಸಲಾಗುತ್ತದೆ ಎಂದು ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಅವರು, ಶಾಲಾ ಕಾಲೇಜುಗಳ ಆರಂಭ ಕುರಿತಂತೆ ರಾಜ್ಯದಲ್ಲಿ ಸಿದ್ಧತೆ ಗಳು ನಡೆಯುತ್ತಿದ್ದು, ಈಗಾಲೇ ನಿರ್ಧರಿಸಿದಂತೆ ಜ. 1 ರಿಂದ ಶಾಲಾ ಕಾಲೇಜುಗಳಲ್ಲಿ ತರಗತಿ ಆರಂಭಿಸಲಾಗುತ್ತದೆ.

ಆದರೂ ಶಾಲೇ ಆರಂಭ ದ ಕುರಿತು  ಮತ್ತೊಮ್ಮೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದಿದ್ದಾರೆ. ಈಗಾಗಲೇ 6 ರಿಂದ 9 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾಗಮ ತರಗತಿ ಆರಂಭವಾಗಿದೆ. ಇದರೊಂದಿಗೆ ಎಸ್ ಎಸ್ ಎಲ್ ಸಿ, ಪಿಯುಸಿ, ಹಾಗೂ ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!