ಉಡುಪಿ: ಮಸೀದಿ ತೆರೆಯುವ ಬಗ್ಗೆ ಉಸ್ತಾದರ ನಿರ್ದೇಶನ ಮೇರೆಗೆ ಕೈಗೊಂಡ ನಿರ್ಣಯಗಳು
ಉಡುಪಿ: ಕೊರೋನ ತಡೆಗಟ್ಟುವ ಸಲುವಾಗಿ ವಿಧಿಸಲಾಗಿದ್ದ ಲಾಕ್‌ಡೌನ್‌ನಲ್ಲಿ ಜೂ.8ರಿಂದ ವಿನಾಯಿತಿ ನೀಡಿ ಮಸೀದಿಗಳಿಗೆ ಪ್ರವೇಶ ಕಲ್ಪಿಸಲಾಗುವುದು ಎಂದು ಸರ್ಕಾರ ಘೋಷಿಸಿರುವ ವಿಷಯ ಸ್ವಾಗತಾರ್ಹ.ದೈನಂದಿನ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಾ ಇದೆ. ಅದರಲ್ಲೂ ನಮ್ಮ ಜಿಲ್ಲೆಯ ಬಗ್ಗೆ ಹೇಳಬೇಕೆಂದಿಲ್ಲ.ಮಸೀದಿ ಪ್ರವೇಶಿಸಲು ಅವಕಾಶ ಸಿಕ್ಕಿತೆಂದು ಅದರ ದುರುಪಯೋಗ ಮಾಡುವುದಾಗಲಿ,ಸುರಕ್ಷಿತ ಅಂತರ ಕಾಪಾಡುವುದನ್ನು ಮರೆಯುವುದಾಗಲೀ ಮಾಡಬಾರದು. ಎಲ್ಲರೂ ಸಂಯಮದಿಂದ ವರ್ತಿಸಬೇಕು.
ಹೊರಗಿನಿಂದ ಬಂದವರ ಬಗ್ಗೆ ಜಾಗರೂಕರಾಗಬೇಕು ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ಕೇಂದ್ರ ಮತ್ತು ರಾಜ್ಯ ವಕ್ಫ್ ಬೋರ್ಡ್ ನೀಡುವ ಕಾನೂನುಗಳನ್ನು ಸಂಪೂರ್ಣವಾಗಿ ಪಾಲಿಸಬೇಕು.ಸರ್ಕಾರ ಮಸೀದಿ ತೆರವು ಗೊಳಿಸುವ ಆದೇಶವನ್ನು ಪಾಲಿಸುವುದರೊಂದಿಗೆ ಅವರ ಮತ್ತು ಇನ್ನಿತರರ ಆರೋಗ್ಯವನ್ನು ಕಾಪಾಡುವುದು ಕೂಡ ಎಲ್ಲರ ಕರ್ತವ್ಯ.
ಈ ಬಗ್ಗೆ ಜಾಗೃತಿ ವಹಿಸುವುದು ಪ್ರತಿ ಮಸೀದಿಯ ಆಡಳಿತ ಮಂಡಳಿಗಳ ಜವಾಬ್ದಾರಿಯಾಗಿದೆ ಮಸೀದಿ ತೆರವು ಗೊಳಿಸಿದರೆ ಉಂಟಾಗುವ ಸಮಸ್ಯೆಗಳು, ಮಸೀದಿ ತೆರವು ಗೊಳಿಸದಿದ್ದರೆ ಉಂಟಾಗುವ ಸಮಸ್ಯೆಗಳು ಈ ಬಗ್ಗೆ ಸೂಕ್ತವಾದ ತೀರ್ಮಾನಗಳನ್ನು ಆಯಾಯ ಜಮಾಅತ್ ನವರು ಕೈ ಗೊಳ್ಳಬೇಕಾಗಿದೆ ಖಾಝಿ ಬೇಕಲ್ ಉಸ್ತಾದ್ ರ ನೇತೃತ್ವದ ಕರ್ನಾಟಕ ಸುನ್ನೀ ಉಲಮಾ ಒಕ್ಕೂಟದ ನಿರ್ದೇಶನವನ್ನು ಸಂಪೂರ್ಣವಾಗಿ ಪಾಲಿಸಲು ಆಯಾಯ ಜಮಾಅತ್ ನವರು ಮುಂದಾಗಬೇಕು ಎಂದು ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ತುರ್ತು ಸಭೆಯಲ್ಲಿ ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಶೈಖುನಾ ಬೇಕಲ ಉಸ್ತಾದರ ನಿರ್ದೇಶನ ಮೇರೆಗೆ ಈ ನಿರ್ಧಾರವನ್ನು ಕೈಗೊಳ್ಳಲಾಯಿತು.
ಮೂಳೂರು ಖಾಝಿ ಭವನದಲ್ಲಿ ಸಮಿತಿಯ ಅಧ್ಯಕ್ಷರಾದ ಹಾಜಿ. ಪಿ ಅಬೂಬಕ್ಕರ್ ನೇಜಾರು ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಅಲ್ಹಾಜ್ ಅಬ್ದುರ್ರಹ್ಮಾನ್ ಮದನಿ ಮೂಳೂರು ದುಅ ನಡೆಸುವ ಮೂಲಕ ಚಾಲನೆ ನೀಡಿದರು ಸಂಘಟನಾ ಕಾರ್ಯದರ್ಶಿ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಸಭೆಯಲ್ಲಿ ವಿಷಯ ಮಂಡಿಸಿದರುಸಂಯುಕ್ತ ಜಮಾಅತ್ ಹಿರಿಯ ನಾಯಕ ಎಮ್ ಹೆಚ್ ಬಿ ಮುಹಮ್ಮದ್ ಮೂಳೂರು, ಉಸ್ಮಾನ್ ಮದನಿ ನೇಜಾರು, ಜಿಲ್ಲಾ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ವೈ ಬಿ ಸಿ ಬಶೀರ್ ಅಲಿ, ಜಿಲ್ಲಾ ನಾಯಕರಾದ ಮನ್ಹರ್ ಇಬ್ರಾಹಿಂ, ಮನ್ಸೂರ್ ಮೆಕ್ಕಾಸ್, ಇಬ್ರಾಹಿಂ ತವಕ್ಕಲ್, ಅಬ್ದುಲ್ ಹಮೀದ್ ಅದ್ದು ಹಾಗೂ ಮತ್ತಿತರರು ಹಾಜರಿದ್ದರು ಕಾರ್ಯದರ್ಶಿ ಹಾಜಿ ಎಮ್ ಎ ಬಾವು ಮೂಳೂರು ಸ್ವಾಗತಿಸಿ ವಂದಿಸಿದರು.