ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಶ್ರದ್ದಾಂಜಲಿ ಸಭೆ
ಉಡುಪಿ: ಜನತೆಯಿಂದ ದೂರವಾದ ಮೂರು ರತ್ನಸಮಾನರಾಗಿರುವ ದಿ. ವಿದ್ಯಾವಚಸ್ಪತಿ ಬನ್ನಂಜೆ ಗೋವಿಂದ ಆಚಾರ್ಯ, ಉದ್ಯಾವರ ಮಾಧವ ಆಚಾರ್ಯ, ದಾಮೋದರ ಐತಾಳ್ ಇವರಿಗೆ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ವಿಪ್ರ ಬಾಂದವರು ಹಾಗೂ ಸಮಾಜ ಬಾಂದವರು ಸೇರಿಕೊಂಡು ಗೀತಾ ಜಯಂತಿ ಹಾಗೂ ಏಕಾದಶಿಯ ಪರ್ವ ಕಾಲದಲ್ಲಿ ಶ್ರೀ ವಿಷ್ಣು ಸಹಸ್ರ ನಾಮ ಪಾರಾಯಣ ನಡೆಸಿ ಬಳಿಕ ಶ್ರದ್ದಾಂಜಲಿಯನ್ನು ಬ್ರಾಹ್ಮೀ ಸಭಾ ಭವನದಲ್ಲಿ ಪರಮ ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದರ ದಿವ್ಯ ಉಪಸ್ಥಿತಿಯಲ್ಲಿ ಸಲ್ಲಿಸಲಾಯಿತು.
ವಿಪ್ರ ಬಾಂದವರ ಪರವಾಗಿ ವಿದ್ವಾನ್ ಗೋಪಾಲ ಆಚಾರ್, ವಿದ್ವಾನ್ ಹೆರ್ಗ ಹರಿಪ್ರಸಾದ್, ರಂಜನ್ ಕಲ್ಕೂರ್, ಕೃಷ್ಣ ರಾಜ್ ಕೋಡಂಚ, ಹರಿಕೃಷ್ಣ ಶಿವತ್ತಾಯ,(ಪೆರಂಪಳ್ಳಿ ) ಶ್ರೀನಿವಾಸ್ ಬಲ್ಲಾಳ್(ಕರಂಬಳ್ಳಿ ವಲಯ ), ವಾದಿರಾಜ್ಅಂಬಲ್ಪಾಡಿ (ಕರ್ನಾಟಕ ಬ್ಯಾಂಕ್ ) ಪ್ರಸನ್ನ ಆಚಾರ್ಯ (ಶ್ರೀ ಪುತ್ತಿಗೆ ಮಠ )ಶ್ರೀ ರಮೇಶ್ ಅಡಿಗ, ಸುಬ್ರಮಣ್ಯ ಭಟ್ (ಉಪ್ಪುರ್ ವಲಯ ) ಎಂ ಬಲರಾಮ್ ರಾವ್ (ಮಟ್ಟು ವಲಯ )ರಾಮಕಾಂತ್ (ಕನ್ನರ್ಪಡಿ ವಲಯ ) ಗೋಪಾಲ್ ಭಟ್, ರವಿ ಪ್ರಕಾಶ್ (ತು ಶಿ ಮಾ ಮ ), ಪದ್ಮಲತಾ ವಿಷ್ಣು (ಬೈಲೂರ್ ವಲಯ ) ಸುಬ್ರಮಣ್ಯ ಜೋಶಿ (ಪುತ್ತೂರು ವಲಯ ), ಅಡೂರ್ (ಜಿಲ್ಲಾ ಬ್ರಾಹ್ಮಣ ಸಭಾ )ಇತರ ಎಲ್ಲಾ ಪ್ರಮುಖರು ನುಡಿ ನಮನ ಸಲ್ಲಿಸಿ ಗೌರವ ಸಲ್ಲಿಸಿದರು.
ಶೋಕ ಅಧಿಕ ವಾದಾಗ ಭಗವತ್ ಗೀತಾ ಶ್ಲೋಕ ಅಗತ್ಯ, ಮಾಧ್ವ ಮತ ಪ್ರಚಾರದಲ್ಲಿ ಕ್ರಾಂತಿ ಮಾಡಿಕೊಂಡು ಬನ್ನಂಜೆ ಗೋವಿಂದ ಆಚಾರ್ ನಾಸ್ತಿಕರನ್ನು ಆಸ್ತಿಕರನ್ನಾಗಿಸುವಲ್ಲಿ ವಿಶೇಷ ಪ್ರಯತ್ನ ಮಾಡಿದ್ದ ದಿವ್ಯ ಚೇತನ ಎಂದರು. ನಮ್ಮ ಸಮಾಜಕ್ಕೆ ಧಾರ್ಮಿಕ, ಸಾಂಸ್ಕೃತಿಕ ವಿಶೇಷ ಕೊಡುಗೆ ನೀಡಿದ ವಿದ್ಯಾ ವಾಚಸ್ಪತಿ ಬನ್ನಂಜೆ ಗೋವಿಂದ ಆಚಾರ್, ಉದ್ಯಾವರ ಮಾಧವ ಆಚಾರ್, ದಾಮೋದರ ಐತಾಳ್ ಆದರ್ಶಗಳು ಮುಂದಿನ ಪೀಳಿಗೆಯಲ್ಲಿ ಬರುವಂತಾಗಲಿ ಎಂದು ಆಶೀರ್ವಾಚನ ಮಾಡಿ ನುಡಿ ನಮನ ಸಲ್ಲಿಸಿದರು.ಸ್ವಾಗತ ಅಧ್ಯಕ್ಷ ವಿಷ್ಣು ಪ್ರಸಾದ್ ಪಾಡಿಗಾರ್, ಪ್ರಸ್ಥಾವನೆ ರಂಜನ್ ಕಲ್ಕೂರ್, ನಿರೂಪಣೆ ಅಶ್ವಥ್ ಭಾರದ್ವಾಜ್ , ಪ್ರವೀಣ್ ಉಪಾಧ್ಯ ಅಂಬಲ್ಪಾಡಿ ಧನ್ಯವಾದವಿತ್ತರು.